ಮನೆ ಅಪರಾಧ ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

0

ಬೆಂಗಳೂರು(Bengaluru):  ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ಟೈಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದ. ಸಂತ್ರಸ್ತ ಯುವತಿ ಉದ್ಯಮಿಯ ಒಡೆತನದ ಪಿಜಿಯಲ್ಲಿಯೇ ವಾಸವಾಗಿದ್ದಳು. ಈ ನಡುವೆ ಯುವತಿಗೆ  ರಿವಾಲ್ವರ್  ತೋರಿಸಿ ಅನಿಲ್ ರವಿ ಶಂಕರ್ ಪ್ರಸಾದ್ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.

ಇದೀಗ ಆರೋಪಿಯನ್ನು ಬಂಧಿಸಿ, ರಿವಾಲ್ವರ್ ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಹಿಂದಿನ ಲೇಖನಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೇ.. ಈತನನ್ನು ಕಿತ್ತುಹಾಕಬೇಕು: ಸಿದ್ಧರಾಮಯ್ಯ
ಮುಂದಿನ ಲೇಖನಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣ: ಇಬ್ಬರ ಬಂಧನ