ಮನೆ ರಾಜ್ಯ ಬಾಗಲಕೋಟೆ: ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿದ್ದ ಏಳು ಲಕ್ಷ ರೂ ಪತ್ತೆ

ಬಾಗಲಕೋಟೆ: ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿದ್ದ ಏಳು ಲಕ್ಷ ರೂ ಪತ್ತೆ

0

ಬಾಗಲಕೋಟೆ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ‌ ಜಾರಿಯಾದ ಬಳಿಕ ಶನಿವಾರ ಬೆಳ್ಳಂಬೆಳಗ್ಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದನ್ನು ಚುನಾವಣೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಸಾಗಿಸುತ್ತಿದ್ದ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಒಟ್ಟು ಏಳು ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್ ನಲ್ಲಿ ಆರು ಲಕ್ಷ ರೂ. ಮತ್ತು ಹುಲ್ಯಾಳ ಚೆಕ್ ಪೋಸ್ಟನಲ್ಲಿ ಒಂದು ಲಕ್ಷ ರೂ.ಗಳ ಹಣ ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಹೇಳಿದ್ದಾರೆ.

ನೀತಿ ಸಂಹಿತೆ ಜಾರಿಯಾದ ಬಳಿಕ ಏಳು ಲಕ್ಷದಷ್ಟು ನಗದು ಇದೇ ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಹಿಂದಿನ ಲೇಖನಒಳ್ಳೆಯ ಉದ್ದೇಶದಿಂದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ಜಾರಿಗೆ ತಂದಿತ್ತು: ನಿತಿನ್ ಗಡ್ಕರಿ
ಮುಂದಿನ ಲೇಖನಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ​ನಲ್ಲಿ ದಾಖಲೆ ಇಲ್ಲದ 480 ಮಿಕ್ಸರ್ ವಶಕ್ಕೆ