ಮನೆ ಅಪರಾಧ ಬಂಟ್ವಾಳ: ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

0

ಬಂಟ್ವಾಳ: ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆಯೋರ್ವವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 15ರ ಗುರುವಾರ (ಇಂದು) ಬೆಳಿಗ್ಗೆ ಸುಮಾರು 6.20 ಕ್ಕೆ ನಡೆದಿದೆ.

ತುಮಕೂರು ಜಿಲ್ಲೆಯ ನಯನ ಎಂ.ಜಿ.(27) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರಾಗಿರಬೇಕು ಎಂದು ಅವರ ಬ್ಯಾಗ್ ನಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ನ ಮಾಹಿತಿಯನ್ನು ರೈಲ್ವೆ ಪೊಲೀಸರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ನೀಡಿದ್ದಾರೆ.

ಆಕೆಯ ಆಧಾರ್ ಕಾರ್ಡ್ ನಲ್ಲಿ ಕೇರ್‌/ಆಫ್‌ ಎಮ್.ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದೆ.

ನಯನ ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದು, ಬಿಸಿರೋಡಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕೆ ಕುಳಿತುಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿಗಳು ಬಿಸಿರೋಡಿನ ಕಚೇರಿಗೆ ನೀಡಿ ಮಾಹಿತಿ ನೀಡಿದ್ದಾರೆ. ನಯನ ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರ ವಿಳಾಸದ ವಿವರ ಸರಿಯಾಗಿ ಇನ್ನಷ್ಟೇ ತಿಳಿಯಬೇಕಿದೆ.

ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹವನ್ನು ಸ್ಥಳೀಯ ಮುಳುಗುತಜ್ಞ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಎ‌ಎಸ್.ಐ.ದೇವಪ್ಪ, ವಿಜಯ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಿಂದಿನ ಲೇಖನರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳು-ನಮ್ಮ‌ ಸಂಸದರು ನಮಗಾಗುತ್ತಿರುವ ಅನ್ಯಾಯದ ವಿರುದ್ಧ ಬಾಯಿ ಬಿಡದೆ ಅನ್ಯಾಯವನ್ನು ಸಮರ್ಥಿಸುತ್ತಿದ್ದರೆ ರಾಜ್ಯದ ಭವಿಷ್ಯದ ಗತಿ ಏನು: ಸಿಎಂ ಪ್ರಶ್ನೆ
ಮುಂದಿನ ಲೇಖನತಮಿಳುನಾಡಿನಿಂದ ಎನ್ ಒಸಿ ಒದಗಿಸಿಕೊಡಲಿ ಮೇಕೆದಾಟು ಅಣೆಕಟ್ಟೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇವೆ: ತೇಜಸ್ವಿ ಸೂರ್ಯ