ಮನೆ ರಾಜ್ಯ ಮಳೆ ಹಾನಿ ತಡೆಯಲು ಟಾಸ್ಕ್‌ ಫೋರ್ಸ್‌ ರಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಳೆ ಹಾನಿ ತಡೆಯಲು ಟಾಸ್ಕ್‌ ಫೋರ್ಸ್‌ ರಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0

ಬೆಂಗಳೂರು (Bengaluru)-ಮಳೆ ಹಾನಿ ತಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಸ್ಕ್​ ಫೋರ್ಸ್ ರಚಿಸಿ ಅದೇಶ ಹೊರಡಿಸಿದ್ದಾರೆ.

ಸಚಿವರ ನೇತೃತ್ವದಲ್ಲಿ ಮಳೆ ವಿಪತ್ತು ನಿರ್ವಹಣೆಗೆ 8 ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಬೆಂಗಳೂರು ಎಂಟು ವಲಯಗಳ ಜವಾಬ್ದಾರಿಯನ್ನು ಸಪ್ತ ಸಚಿವರಿಗೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ರಾಜ್ಯ ಸರ್ಕಾರ, ಶಾಸಕರು, ಸಂಸದರು, ಅಧಿಕಾರಿಗಳನ್ನೊಳಗೊಂಡ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ ಸಚಿವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ದಕ್ಷಿಣ ವಲಯ ಟಾಸ್ಕ್ ಫೋರ್ಸ್​- ಸಚಿವ ಆರ್. ಅಶೋಕ್, ಪೂರ್ವ ವಲಯ ಟಾಸ್ಕ್ ಫೋರ್ಸ್​- ಸಚಿವ ಡಾ.ಅಶ್ವಥ್ ನಾರಾಯಣ್, ಪಶ್ಚಿಮ ವಲಯ ಟಾಸ್ಕ್ ಫೋರ್ಸ್– ಸಚಿವ ವಿ. ಸೋಮಣ್ಣ, ಆರ್.ಆರ್.ನಗರ ವಲಯ  ಎಸ್. ಟಿ. ಸೋಮಶೇಖರ್, ಮಹದೇವಪುರ ವಲಯ ಟಾಸ್ಕ್ ಫೋರ್ಸ್– ಭೈರತಿ ಬಸವರಾಜ್, ಬೊಮ್ಮನಹಳ್ಳಿ ವಲಯ– ಗೋಪಾಲಯ್ಯ, ಯಲಹಂಕ ಮತ್ತು ದಾಸರಹಳ್ಳಿ ಎರಡೂ ವಲಯಗಳ ಟಾಸ್ಕ್ ಫೋರ್ಸ್– ಮುನಿರತ್ನ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

15 ದಿನ ಅಧಿಕಾರಿಗಳಿಗೆ ರಜೆ ಇಲ್ಲ:

ಅಗತ್ಯ ತುರ್ತು ಸಂದರ್ಭಗಳಲ್ಲಿ ಹಣ ಬಳಕೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿ‌ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಮೂರು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. 15 ದಿನಗಳ ಕಾಲ ಅಧಿಕಾರಿಗಳಿಗೆ ರಜೆ ನೀಡಬೇಡಿ. ಮಳೆಯಿಂದ ಉಂಟಾದ ಹಾನಿ ಸರಿಪಡಿಸಲು ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಿಂದಿನ ಲೇಖನಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಮುಂದಿನ ಲೇಖನಯಾತ್ರಾಸ್ಥಳ ಪರಶುರಾಮ ಕುಂಡ್‌ಗೆ ರೈಲ್ವೆ ಸಂಪರ್ಕ: ಅಮಿತ್ ಶಾ