ಮನೆ ರಾಷ್ಟ್ರೀಯ ಯಾತ್ರಾಸ್ಥಳ ಪರಶುರಾಮ ಕುಂಡ್‌ಗೆ ರೈಲ್ವೆ ಸಂಪರ್ಕ: ಅಮಿತ್ ಶಾ

ಯಾತ್ರಾಸ್ಥಳ ಪರಶುರಾಮ ಕುಂಡ್‌ಗೆ ರೈಲ್ವೆ ಸಂಪರ್ಕ: ಅಮಿತ್ ಶಾ

0
ಚಿತ್ರ ಕೃಪೆ: ಎಎನ್‌ ಐ

ನಾಮ್‌ಸಾಯಿ (ಅರುಣಾಚಲ ಪ್ರದೇಶ): ಹಿಂದೂ ಯಾತ್ರಾಸ್ಥಳ ಪರಶುರಾಮ ಕುಂಡ್‌ಗೆ ರೈಲ್ವೆ ಸಂಪರ್ಕ ಕಲ್ಪಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ನಾಮ್‌ಸಾಯಿಯಲ್ಲಿ ಮಾತನಾಡಿದ ಅವರು, ಪರಶುರಾಮ ಕುಂಡ್‌ಗೆ ರೈಲ್ವೆ ಸಂಪರ್ಕ ಕಲ್ಪಿಸಲಿದ್ದೇವೆ. ರಾಜ್ಯದಾದ್ಯಂತ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಿದ್ದೇವೆ. ರಾಜ್ಯದ ದೂರದ ಸ್ಥಳಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರವು ಈಶಾನ್ಯದಲ್ಲಿ ವಿವಾದಗಳನ್ನು ಕೊನೆಗಾಣಿಸಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶ ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ 9,600 ತೀವ್ರವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ. ಬಿಜೆಪಿ ಸರ್ಕಾರವು ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ಪ್ರಮಾಣವನ್ನು ಶೇ.89ರಷ್ಟು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಮಳೆ ಹಾನಿ ತಡೆಯಲು ಟಾಸ್ಕ್‌ ಫೋರ್ಸ್‌ ರಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನವಾಹನಗಳ ನೋಂದಣಿ ಫಲಕದ ಮೇಲಿನ ಹೆಸರು, ಚಿನ್ನೆ, ಲಾಂಛನ ತೆರವುಗೊಳಿಸಿ: ರಾಜ್ಯ ಸರ್ಕಾರ ಆದೇಶ