ಒಬ್ಬ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಆತನಿಗೆ ವ್ಯಾಯಾಮ ಮತ್ತು ಯೋಗ ತುಂಬಾ ಅಗತ್ಯವಾಗಿರುತ್ತದೆ. ಅದರಲ್ಲೂ ಯೋಗ ಮಾಡುವ ಮನಸ್ಸಿದ್ದರೆ ಯಾವ ಯೋಗದ ಭಂಗಿ ಹೇಗೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸತ್ಯ ತಿಳಿದುಕೊಂಡರೆ ತುಂಬಾ ಒಳ್ಳೆಯದು.
ಬಟರ್ ಫ್ಲೈ ಅಥವಾ ಚಿಟ್ಟೆಯ ಭಂಗಿ ಒಂದು ಯೋಗಾಸನವಾಗಿದ್ದು, ಮುಖ್ಯವಾಗಿ ನಿಮ್ಮ ಸೊಂಟದ ಭಾಗದ ಮಾಂಸಖಂಡಗಳ ಸದೃಢತೆಯಲ್ಲಿ ನೆರವಾಗುತ್ತದೆ. ಇದರಿಂದ ನಿಮ್ಮ ಒಳತೊಡೆಗಳು, ಸೊಂಟದ ಭಾಗ ಮತ್ತು ಬೆನ್ನಿನ ಕೆಳಭಾಗದಲ್ಲಿರುವ ಮಾಂಸ ಖಂಡಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.
ನೀವೇಕೆ ಈ ಯೋಗ ಮಾಡಬೇಕು?
ಈ ಯೋಗಾಸನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹೆಚ್ಚು ಸಿಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಹಾಗೂ ಒಳ ಮನಸ್ಸಿನ ಅರಿವು ಹೆಚ್ಚಾಗುತ್ತದೆ.
ಈ ಯೋಗಾಸನದಿಂದ ಆಗುವ ಉಪಯೋಗಗಳು
• ಯೋಗ ಮಾಡಬೇಕು ಎಂದುಕೊಂಡಿರುವ ಜನರಿಗೆ ಯಾವುದೇ ಭಂಗಿ ಕೂಡ ಕಷ್ಟ ಎನಿಸುವುದಿಲ್ಲ.
• ಬಟರ್ ಫ್ಲೈ ಭಂಗಿ ಕೂಡ ತುಂಬಾ ಸುಲಭವಾಗಿ ಮಾಡ ಬಹುದು ಮತ್ತು ಇದರಿಂದ ಹಲವಾರು ಪ್ರಯೋಜ ನಗಳು ಸಿಗುತ್ತವೆ. ಅವುಗಳೆಂದರೆ…
ಸೊಂಟದ ನೋವು ಮಂಗಮಾಯ
• ದೀರ್ಘಕಾಲ ಸೊಂಟದ ನೋವಿನಿಂದ ಬಳಲುತ್ತಿರುವ ಜನರಿಗೆ ಬಟರ್ಫ್ಲೈ ಭಂಗಿ ಯೋಗಾಸನ ಒಂದು ಉತ್ತಮ ಪರಿಹಾರ ಎಂದು ಹೇಳಬಹುದು.
• ಏಕೆಂದರೆ ಯೋಗ ಪಟುಗಳು ಹೇಳುವ ಹಾಗೆ ಈ ಭಂಗಿ ಯಿಂದ ಸೊಂಟದ ನೋವನ್ನು ಅತ್ಯಂತ ಪರಿಣಾಮ ಕಾರಿಯಾಗಿ ಉಪಶಮನ ಮಾಡಿಕೊಳ್ಳ ಬಹುದು.
ಮಾನಸಿಕ ಒತ್ತಡ ಮತ್ತು ತಲೆನೋವು ದೂರಾಗುತ್ತದೆ
• ಬಟರ್ ಫ್ಲೈ ಭಂಗಿ ಯೋಗಾಸನ ಮಾಡುವುದರಿಂದ ಕುತ್ತಿಗೆ, ಬೆನ್ನು ಹಾಗೂ ತಲೆಯ ಭಾಗದ ಒತ್ತಡ ಕಡಿಮೆ ಯಾಗುತ್ತದೆ.
• ಇದರಿಂದ ತುಂಬಾ ವಿಪರೀತ ತಲೆನೋವು ಇರುವವರೆಗೂ ಕೂಡ ಪರಿಹಾರ ಸಿಗುತ್ತದೆ. ಏಕೆಂದರೆ ಈ ಮೂಲಕ ಆಮ್ಲ ಜನಕ ಪೂರೈಕೆ ಸರಾಗವಾಗಿ ನಡೆಯುತ್ತದೆ.
ಒಳತೊಡೆಗಳು ಬಲಗೊಳ್ಳುತ್ತವೆ
• ತುಂಬಾ ಜನರಿಗೆ ಇದೊಂದು ಸಮಸ್ಯೆ ಇರುತ್ತದೆ. ಏನೆಂದರೆ ತೊಡೆಗಳ ಭಾಗದಲ್ಲಿ ಹೆಚ್ಚು ಸಾಮರ್ಥ್ಯ ಇಲ್ಲ ಎನ್ನುವ ಭಾವನೆ ಮೂಡುತ್ತದೆ. ಇದರಿಂದ ಬಲ ಹೆಚ್ಚಾಗಿ ಬೇಕಾಗಿರುವ ಕೆಲಸಗಳನ್ನು ಮಾಡಲು ಸಾಧ್ಯವಾಗು ವುದಿಲ್ಲ.
• ಆದರೆ ಬಟರ್ ಫ್ಲೈ ಯೋಗಾಸನ ಮಾಡುವುದರಿಂದ ಈ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆ. ತೊಡೆಯ ಆಕಾರ ಕೂಡ ಸುಂದರವಾಗಿ ರೂಪುಗೊಳ್ಳುತ್ತದೆ.
ಸೊಂಟದ ಮಾಂಸ ಖಂಡಗಳು ಸದೃಢವಾಗುತ್ತವೆ
• ಸೊಂಟ ನೋವಿನ ಸಮಸ್ಯೆ ಹೊಂದಿರುವವರು ಬಟರ್ ಫ್ಲೈ ಭಂಗಿ ಯೋಗಾಭ್ಯಾಸವನ್ನು ರೂಢಿ ಮಾಡಿಕೊಂಡು ತಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
• ಸೊಂಟದ ಭಾಗದಲ್ಲಿ ಮಾಂಸ ಖಂಡಗಳನ್ನು ಸರಾಗವಾಗಿ ಮಾಡಿ ಉತ್ತಮ ರಕ್ತ ಸಂಚಾರ ಆಗುವಂತೆ ಈ ಭಂಗಿ ನೆರವಾಗುತ್ತದೆ.