ಮನೆ ರಾಜಕೀಯ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಜಾರಿ: ಯತ್ನಾಳ್

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಜಾರಿ: ಯತ್ನಾಳ್

0

ಧಾರವಾಡ: ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯನ್ನು ಜಾರಿ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Join Our Whatsapp Group

ಜಿಲ್ಲೆಯ ಕುಂದಗೋಳ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಮಾತನಾಡಿ, ಹಿಂದೂ ಮತ್ತು ದೇಶದ ವಿರುದ್ಧ ಯಾರಾದರು ಮಾತಾಡಿದರೆ ಢಂಢಂ ಖಚಿತ, ಕುಯ್​ಕುಯ್​ ಅಂದರೆ ಎನ್’​ಕೌಂಟರ್ ನಿಶ್ಚಿತ, ರೋಡ್ ಮೇಲೆಯೇ ಡಿಷ್ಕ್ಯಾಂ ಅಂತ ಹೇಳಿದ್ದಾರೆ.

ಟಿಪ್ಪು ಸುಲ್ತಾನ ಹರಾಂ ಕೋರ್ ಎಂದ ಯತ್ನಾಳ್, ಟಿಪ್ಪು ಸುಲ್ತಾನ್ ಲಕ್ಷಂತಾಂತರ ಹಿಂದೂಗಳನ್ನು ಕೊಂದಿದ್ದಾನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಟಿಪ್ಪು ಫೋಟೋ ತೆಗೆದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್​ ಫೋಟೋ ಹಾಕುತ್ತೇವೆ ಎಂದರು.

ಮೂರು ಬಿಟ್ಟವರು ಕಾಂಗ್ರೆಸ್​ ಪಕ್ಷದಲ್ಲಿ ಇದ್ದಾರೆ. ಇವತ್ತು ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಗ ಮಾತನಾಡಿದ್ದಾನೆ. ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್’​ನಲ್ಲಿದ್ದಾರೆ. ದೇಶದ ಜನರ ಆಶೀರ್ವಾದದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಇಂತಹ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ, ಈ ಬಗ್ಗೆ ಯೋಚನೆ ಮಾಡಿ ಎಂದು ಆಕ್ರೋಶ ಹೊರಹಾಕಿದರು.

ಹಿಂದಿನ ಲೇಖನ50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಹುಲಿಯಾʼ ಟೈಟಲ್ ಬಿಡುಗಡೆ
ಮುಂದಿನ ಲೇಖನಬರೋಬ್ಬರಿ 827 ರನ್ಸ್: ಐಪಿಎಲ್’ನಲ್ಲಿ ಹೊಸ ಇತಿಹಾಸ ಸೃಷ್ಟಿ..!