ಮನೆ ಕಾನೂನು ಬೆಂಗಳೂರು ಸಂಚಾರಿ ನಿಯಮ ಉಲ್ಲಂಘನೆ: ಒಂದೇ ದಿನ ಸಾವಿರಕ್ಕೂ ಹೆಚ್ಚು ಕೇಸ್ ದಾಖಲು

ಬೆಂಗಳೂರು ಸಂಚಾರಿ ನಿಯಮ ಉಲ್ಲಂಘನೆ: ಒಂದೇ ದಿನ ಸಾವಿರಕ್ಕೂ ಹೆಚ್ಚು ಕೇಸ್ ದಾಖಲು

0

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿರುವ ಬೆಂಗಳೂರು ಸಂಚಾರ ಪೊಲೀಸರು ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

Join Our Whatsapp Group

ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ನೋ ಎಂಟ್ರಿ ಪ್ರದೇಶದಲ್ಲಿ ವಾಹನ ನುಗ್ಗಿಸುವುದು, ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್‌ ರೈಡಿಂಗ್‌ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಟ್ರಾಫಿಕ್ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿದ್ದರು. ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ 1,055 ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ 812 ವಾಹನ ಚಾಲಕರ ವಿರುದ್ಧ ಏಕಮುಖ ಸಂಚಾರ ಇರುವಲ್ಲಿ ನಿಯಮ ಉಲ್ಲಂಘಿಸಿ ಎದುರಿನಿಂದ ಬಂದ ಮತ್ತು ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. 127 ಚಾಲಕರಿಗೆ ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಒಟ್ಟು 64,000 ರೂ. ದಂಡ ವಿಧಿಸಲಾಗಿದೆ.