ಮನೆ ರಾಜ್ಯ ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ: 5 ಗಂಟೆಯಲ್ಲಿ 7.62 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ: 5 ಗಂಟೆಯಲ್ಲಿ 7.62 ಲಕ್ಷ ರೂ. ದಂಡ ಸಂಗ್ರಹ

0

ಬೆಂಗಳೂರು: ಶನಿವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೇವಲ 5 ಗಂಟೆಗಳಲ್ಲಿ 7.62 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಶನಿವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

Join Our Whatsapp Group

ಅಕ್ರಮ ಪಾರ್ಕಿಂಗ್, ನೋ ಎಂಟ್ರಿ ಉಲ್ಲಂಘನೆ, ಫುಟ್‌ಪಾತ್ ರೈಡಿಂಗ್ ಮತ್ತು ಒನ್​ ವೇ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 1,507 ಪ್ರಕರಣಗಳನ್ನು ದಾಖಲಿಸಿ, 7.62 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ 722 ನೋ ಎಂಟ್ರಿ ಕೇಸ್‌, 590 ಒನ್​ ವೇ ಉಲ್ಲಂಘನೆ ಪ್ರಕರಣಗಳಿದ್ದವು. ಒಟ್ಟು ದಾಖಲಾದ ಪ್ರಕರಣಗಳಲ್ಲಿ 1,312 ರಷ್ಟು ನೋ ಎಂಟ್ರಿ, ಒನ್​ ವೇ ಉಲ್ಲಂಘನೆಯೇ ಇದ್ದವು.

ಅಕ್ರಮ ಪಾರ್ಕಿಂಗ್: 127 ಪ್ರಕರಣಗಳನ್ನು ದಾಖಲಿಸಿ 64,500 ರೂ. ದಂಡ ಸಂಗ್ರಹಿಸಲಾಗಿದೆ.

ನೋ ಎಂಟ್ರಿ: 722 ಪ್ರಕರಣಗಳನ್ನು ದಾಖಲಿಸಿ 3,66,500 ರೂ. ದಂಡ ಸಂಗ್ರಹಿಸಲಾಗಿದೆ.

ಫುಟ್ ಪಾತ್ ರೈಡಿಂಗ್: 68 ಪ್ರಕರಣಗಳನ್ನು ದಾಖಲಿಸಿ 34,000 ರೂ. ದಂಡ ವಿಧಿಸಿದ್ದಾರೆ.

ಒನ್ ವೇ ಉಲ್ಲಂಘನೆ: 590 ಪ್ರಕರಣಗಳನ್ನು ದಾಖಲಿಸಿ 2,97,000 ರೂ. ದಂಡ ಸಂಗ್ರಹಿಸಲಾಗಿದೆ.

ಸಂಚಾರ ನಿಯಮ ಜಾಗೃತಿ

ಬೆಂಗಳೂರು ನಗರದಾದ್ಯಂತ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಟ್ರಾಫಿಕ್ ಪೊಲೀಸರು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಮ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಾತ್ರವಲ್ಲದೆ, ವಿವಿಧ ಸ್ಥಳಗಳಿಗೆ ತೆರಳಿಯೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.” ಎಂದು ವಾಹನ ಚಾಲನೆ ವೇಳೆ ಮೊಬೈಲ್ ಬಳಸುವವರನ್ನು ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.