ಬೆಂಗಳೂರು(Bengaluru): ರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗುವವರೆಗೆ ಬಿಜೆಪಿ ತನ್ನ 122 ಶಾಸಕರು ಮತ್ತು 25 ಸಂಸದರನ್ನು ನಗರದ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಳ್ಳುವಂತೆ ಆದೇಶ ಹೊರಡಿಸಿದೆ.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿರುವ ಹಿನ್ನೆಲೆಯಲ್ಲಿ ಶನಿವಾರವೇ ಹೋಟೆಲ್ ಗೆ ಬಂದು ಸೇರುವಂತೆ ಮುಖ್ಯಸ್ಥರಾದ ಎಂ.ಸತೀಶ್ ರೆಡ್ಡಿ ಎಲ್ಲಾ ಶಾಸಕರಿಗೂ ಸಂದೇಶ ರವಾನಿಸಿದ್ದಾರೆ.
ತಮ್ಮ ಪ್ರವಾಸ ಕಾರ್ಯಕ್ರಮಗಳ ಕಾರಣದಿಂದ ವಿನಾಯಿತಿ ಕೋರಿರುವ ಕೆಲವು ಸಚಿವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಹೋಟೆಲ್‌ನಲ್ಲಿರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಈ ಸಂಬಂದ ಶಾಸಕರೊಬ್ಬರು ಪ್ರತಿಕ್ರಿಯಿಸಿ, ರಾಷ್ಟ್ರಪತಿ ಚುನಾವಣೆಯ ಬಿಜಿಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತದಾನ ಮಾಡುತ್ತೇವೆ. ಅದಕ್ಕಾಗಿ ಅಣಕು ಮತದಾನದ ಅಗತ್ಯವಿಲ್ಲ. ಹೊಟೇಲ್‌ನಲ್ಲಿದ್ದುಕೊಂಡು ಸಾಧಿಸುವುದಾದರೂ ಏನು? ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆ ವಿಪ್ ಜಾರಿ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.