ಮನೆ ಅಪರಾಧ ಅಪ್ರಾಪ್ತೆ ವರಿಸಲು ಆಧಾರ್ ಕಾರ್ಡ್ ತಿದ್ದಿದ ವರನ ಬಂಧನ

ಅಪ್ರಾಪ್ತೆ ವರಿಸಲು ಆಧಾರ್ ಕಾರ್ಡ್ ತಿದ್ದಿದ ವರನ ಬಂಧನ

0

ಬೆಂಗಳೂರು(Bengaluru): ಅಪ್ರಾಪ್ತೆಯನ್ನು ವಿವಾಹವಾಗುವ ಸಲುವಾಗಿ ಆಧಾರ್ ಕಾರ್ಡ್ ನ್ನು ತಿದ್ದಿದ ಆರೋಪದಡಿಯನ್ನು ಯುವಕನನ್ನು ಬಂಧಿಸಲಾಗಿದೆ.

ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ತೆರಳಿದ್ದ ವೇಳೆ ಯುವಕನ ಕೃತ್ಯ ಬಯಲಾಗಿದೆ.

2005 ಇಸವಿ ಇರುವುದನ್ನು 2000 ಎಂಬುದಾಗಿ ತಿದ್ದಿರುವುದು ಮತ್ತು ಇತರ ಲೋಪದೋಷಗಳನ್ನು ಸಿಬ್ಬಂದಿ ಗಮನಿಸಿ, ಆಧಾರ್ ವೆಬ್​ಸೈಟ್​​ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮನು ಎನ್ನುವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದು, ಆಧಾರ್ ಕಾರ್ಡ್ ತಿದ್ದಿದವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಹಿಂದಿನ ಲೇಖನರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಶಾಸಕರಿಗೆ ಬಿಜಿಪಿ ಆದೇಶ
ಮುಂದಿನ ಲೇಖನಚಿಕ್ಕಮಗಳೂರು ಉಸ್ತುವಾರಿ ಬೈರತಿ ಬಸವರಾಜ್ ಹೆಗಲಿಗೆ