ಮನೆ ಪ್ರಕೃತಿ ಪ್ರವಾಸಿಗರನ್ನು ಸೆಳೆಯುತ್ತಿರುವ ಬಿಳಿಗಿರಿರಂಗನಬೆಟ್ಟ

ಪ್ರವಾಸಿಗರನ್ನು ಸೆಳೆಯುತ್ತಿರುವ ಬಿಳಿಗಿರಿರಂಗನಬೆಟ್ಟ

0

ಚಾಮರಾಜನಗರ(Chamarajanagara): ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟ ಈಗ ಮಂಜಿನ ಬೆಟ್ಟವಾಗಿ ಬದಲಾಗಿದ್ದು, ಪ್ರವಾಸಿಗರು, ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ.

ನಿರಂತರ ಮಳೆ, ಮೋಡ ಕವಿದ ವಾತಾವರಣ ಹಾಗೂ ಚಳಿ ಗಾಳಿಯಿಂದ ಬಿಳಿಗಿರಿರಂಗನಬೆಟ್ಟದಲ್ಲಿ ಮಂಜು ಮುಸುಕಿದ ವಾತಾವರಣವಿದ್ದು,  ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರನ್ನು ಸೆಳೆಯುತ್ತಿದೆ.

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನ ಬೆಟ್ಟದಲ್ಲಿ ವಾರದಿಂದೀಚೆಗೆ ದಟ್ಟ ಮಂಜಿನ ವಾತಾವರಣ ಇದೆ. ವೇಗವಾಗಿ ಬೀಸುವ ಶೀತಗಾಳಿಯಿಂದ ಥರಗುಟ್ಟುವ ಚಳಿಯ ಅನುಭವವಾಗುತ್ತಿದೆ. ಬೆಟ್ಟದಲ್ಲಿ ವಾತಾವರಣದ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.

ಬೆಳಿಗ್ಗೆ 11 ಗಂಟೆಯಾದರೂ ಮಂಜು ತಿಳಿಯಾಗುತ್ತಿಲ್ಲ. ಬೆಟ್ಟದ ಸುತ್ತ ಗಾಳಿಗೆ ಚಲಿಸುವ ಮಂಜಿನ ದೃಶ್ಯಾವಳಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.