ಕೊಲ್ಕತ್ತಾ: ಬಿರ್ಭೂಮ್ ಅಗ್ನಿಸ್ಪರ್ಶ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಎಫ್ಐಆರ್ ನಲ್ಲಿ 21 ಶಂಕಿತರನ್ನು ಹೆಸರಿಸಿದೆ.
ಮಾರ್ಚ್ 21 ರಂದು ಪಶ್ಚಿಮ ಬಂಗಾಳದ ಬಿರ್ಭೂಮ್ ನ ಬೊಗ್ಟುಯಿ ಗ್ರಾಮದಲ್ಲಿ, ದುಷ್ಕರ್ಮಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು.
ಶುಕ್ರವಾರ ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಸ್ಥಳೀಯ ಪಂಚಾಯತ್ ನ ಟಿಎಂಸಿ ‘ಉಪ-ಪ್ರಧಾನ್’ ಆಗಿದ್ದ ಭದು ಶೇಖ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ನಡೆಸಿದ ‘ಪ್ರತಿಕಾರ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಸಿಬಿಐ ತನ್ನ ಎಫ್ಐಆರ್ ನಲ್ಲಿ ಹೇಳಿದೆ.
ಇದಲ್ಲದೆ, ’70-80 ಜನರ ಗುಂಪು’ ಸಂತ್ರಸ್ತರ ಮನೆಗಳನ್ನು ಧ್ವಂಸ ಮಾಡಿದೆ. ‘ಮನೆಯಲ್ಲಿದ್ದವರನ್ನು ಕೊಲ್ಲುವ ದೃಷ್ಟಿಯಿಂದ’ ಬೆಂಕಿ ಹಚ್ಚಿದೆ ಎಂದು ಎಫ್ಐಆರ್ ಹೇಳುತ್ತದೆ.