ಮನೆ ಸುದ್ದಿ ಜಾಲ ದೇವೇಗೌಡರಿಗೆ ಟಿಕೆಟ್ ನೀಡದೇ ಬಿಜೆಪಿ ಅಪಮಾನ ಮಾಡಿದೆ : ಬಿ.ಕೆ.ಹರಿಪ್ರಸಾದ್

ದೇವೇಗೌಡರಿಗೆ ಟಿಕೆಟ್ ನೀಡದೇ ಬಿಜೆಪಿ ಅಪಮಾನ ಮಾಡಿದೆ : ಬಿ.ಕೆ.ಹರಿಪ್ರಸಾದ್

0

ಬೆಂಗಳೂರು: ದೇವೇಗೌಡರ ಸಹಾಯದಿಂದ ಸಂಸತ್ತಿನಲ್ಲಿ ಬಿಜೆಪಿ ಬಿಲ್ ಪಾಸ್ ಮಾಡಿಕೊಂಡಿತು. ಆದರೆ, ಈಗ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೈ ತಪ್ಪಿದ್ದರ ಬಗ್ಗೆ ಪ್ರತಿಕ್ರಿಯಿಸುತ್ತಾ, ದೇವೇಗೌಡರ ಸಹಾಯದಿಂದ ಬಿಜೆಪಿ ಸಂಸತ್ತಿನಲ್ಲಿ ಬಿಲ್ ಪಾಸ್ ಮಾಡಿಕೊಂಡಿತು. ಆದರೆ ಈಗ ಅಪಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸ್ತಾರೆ ಎಂದು ಕಿಡಿಕಾರಿದರು. ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಪರಿಷತ್ ಚುನಾವಣೆಗೆ ಜೆಡಿಎಸ್ ಅವರು ಅಭ್ಯರ್ಥಿ ಹಾಕ್ತಿದ್ದಾರೆ. ಅವರು ಅಭ್ಯರ್ಥಿ ಹಾಕಲಿ, ರಾಜಕೀಯದಲ್ಲಿ ಇವೆಲ್ಲ ಬೇಕಾಗುತ್ತೆ. ರಾಜಕೀಯ ಮಾಡೋದು ಎಂದರೆ ಇದೇನೆ. ನಮಗೆ ವಿಶ್ವಾಸ, ನಂಬಿಕೆ ಇದೆ. ಗೆಲ್ತೀವಿ ಅನ್ನೋ ವಿಶ್ವಾಸ ಇದೆ. ಕಾದು ನೋಡೋಣ ಏನಾಗುತ್ತೆ ಅಂತ. ನಮ್ಮಲ್ಲಿ ಯಾರು ಆ ಕಡೆ ಹೋಗುವ ಪರಿಸ್ಥಿತಿ ಇಲ್ಲ ಎಂದರು. ನಾವು ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಾವು ಗೆಲ್ಲಲು ಬೇಕಾದ ಎಲ್ಲಾ ಸಂಖ್ಯೆ ನಮ್ಮ ಬಳಿ ಇದೆ. ಐದು ಅಭ್ಯರ್ಥಿಗಳು ಗೆಲ್ಲುವ ಸಂಖ್ಯೆ ನಮ್ಮ ಬಳಿ ಇದೆ. ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಲ್ಲ ಶಾಸಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ನಾವು ಗೆಲ್ತೀವಿ. ಜೆಡಿಎಸ್ ಬಳಿ ಸಂಖ್ಯೆಯೇ ಇಲ್ಲ, ಹೀಗಾಗಿ ಆತ್ಮಸಾಕ್ಷಿಯ ಮತ ಅಂತಾ ಹೇಳ್ತಾ ಇದಾರೆ. ಅವರ ಬಳಿ ಸಂಖ್ಯೆ ಇಲ್ಲ ಎಂದು ತಿಳಿಸಿದರು. ಐದನೇ ಅಭ್ಯರ್ಥಿ ಕಣಕ್ಕೆ ವಿಚಾರವಾಗಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ, ಚೆಸ್ ಗೇಮ್​ನಲ್ಲಿ ಯಾವ ಪಾನ್ ಎಲ್ಲಿ ಇಡಲಾಗುತ್ತೆ ಅಂತಾ ಹೇಳೋಕೆ ಆಗುತ್ತಾ?. ನೋಡೋಣ ಎಂದರು. ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮಾತನಾಡಿ, ನಾನು ಆ ವಿಚಾರ ಸದ್ಯಕ್ಕೆ ಮಾತನಾಡೋದಿಲ್ಲ. ಆ ವಿಷಯ ಮಾತನಾಡೋದಿಲ್ಲ. ಆದರೆ, ನಮ್ಮ ಪಕ್ಷ ಏನು ಹೇಳಿದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು. ಮಿಸ್ಟರ್‌ ವಸೂಲಿವಾಲಾ ಸುರ್ಜೇವಾಲ ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ. ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರು ಜೆಡಿಎಸ್, 1997ರಲ್ಲಿ ಕುತಂತ್ರದಿಂದ ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು. ಕಾಂಗ್ರೆಸ್ ಪಕ್ಷ ಮಾಡಿದ ಈ ಮಹಾದ್ರೋಹವನ್ನು ಕಳೆದ 30 ವರ್ಷದಿಂದ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ?. 2019ರಲ್ಲಿ ಮೈತ್ರಿ ನಾಟಕವಾಡಿ, ಹೆಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಸರ್ಕಾರ ಕೆಡವಿದ್ದೂ ನಿಮ್ಮದೇ ಕಾಂಗ್ರೆಸ್ ಪಕ್ಷ ಎಂದು ಕಿಡಿಕಾರಿದೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌ ಹಾಗೂ ಡಾ. ಮನಮೋಹನ್‌ ಸಿಂಗ್‌ ಅವರಂತಹ ನಾಯಕರನ್ನು ನಿಮ್ಮ ನಕಲಿ ಗಾಂಧಿ ಕುಟುಂಬ ಹೇಗೆ ಅಪಮಾನಿಸಿ, ಹೇಗೆಲ್ಲಾ ನಡೆಸಿಕೊಂಡಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್ ವಸೂಲಿವಾಲ ಎಂದು ವಾಗ್ದಾಳಿ ನಡೆಸಿದೆ. ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು, ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ಕಾಂಗ್ರೆಸ್ಸಿಗರೇ, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?. ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಕನ್ನಡ ನೆಲೆ ಕಂಡ ಏಕೈಕ ಪ್ರಧಾನಿ. ಇಮ್ಮಡಿ ಪುಲಕೇಶಿ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನದ ಪರಾಕಾಷ್ಠೆ ಎಂದು ಜೆಡಿಎಸ್ ಬರೆದುಕೊಂಡಿದೆ ಎಂಬುದ್ದಾಗಿದೆ.