ಹಿಮಾಚಲಪ್ರದೇಶ: ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ಮಧ್ಯೆಯೂ ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಸೆರಾಜ್ ಕ್ಷೇತ್ರದಿಂದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗೆಲುವು ಸಾಧಿಸಿದರೆ, ಮಂಡಿ ಜಿಲ್ಲೆಯ ಸುಂದರನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಗೆಲುವು ಪಡೆದಿದ್ದಾರೆ.
ಸೆರಾಜ್ ಮತ್ತು ಸುಂದರ ನಗರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಸಿಎಂ ಜೈ ರಾಮ್ ಠಾಕೂರ್ ಮತ್ತು ರಾಕೇಶ್ ಜಮ್ವಾಲ್ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದರು.ಹಿಂದಿನ 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಹನ್ ಲಾಲ್ 23282 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಅವರು 32545 ಮತಗಳನ್ನು ಪಡೆದಿದ್ದರು. ರಾಕೇಶ್ ಜಮ್ವಾಲ್ 9263 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇನ್ನು ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಟ್ರೆಂಡ್ ಪ್ರಕಾರ ಕಾಂಗ್ರೆಸ್ 38 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೇವಲ 27 ಸ್ಥಾನಗಳಲ್ಲಷ್ಟೇ ಮುನ್ನಡೆ ಪಡೆದುಕೊಂಡಿದೆ. ಇನ್ನೂ ಹಲವು ಹಂತಗಳ ಮತ ಎಣಿಕೆ ಬಾಕಿ ಇದ್ದು, ಅಂತಿಮವಾಗಿ ಯಾವ ಫಲಿತಾಂಶ ಬರಲಿದೆ ಕಾದು ನೋಡಬೇಕಿದೆ.