ಮನೆ ರಾಷ್ಟ್ರೀಯ ಆಮ್‌ ಆದ್ಮಿ ಪಕ್ಷ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ: ಮನೀಶ್‌ ಸಿಸೋಡಿಯಾ

ಆಮ್‌ ಆದ್ಮಿ ಪಕ್ಷ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ: ಮನೀಶ್‌ ಸಿಸೋಡಿಯಾ

0

ನವದೆಹಲಿ(Newdelhi): ಗುಜರಾತ್‌’ನಲ್ಲಿ ಆಮ್‌ ಆದ್ಮಿ ಪಕ್ಷ ಗಳಿಸಿರುವ ಮತಗಳು ನಮ್ಮನ್ನು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮೊದಲ ಸಲ ಆರೋಗ್ಯ ಮತ್ತು ಶಿಕ್ಷಣ ಆಧಾರಿತ ರಾಜಕೀಯ ಪಕ್ಷವೊಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶದ ಜನತೆಗೆ ಅಭಿನಂದನೆಗಳು ಎಂದಿದ್ದಾರೆ.

ಗುಜರಾತ್‌ನಲ್ಲಿ ಎಎಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಎಎಪಿ 2 ಸ್ಥಾನ ಗೆಲ್ಲಬೇಕು ಮತ್ತು ಶೇ.6ರಷ್ಟು ಮತ ಗಳಿಸಬೇಕು. ಗುಜರಾತ್‌ ಚುನಾವಣೆಯಲ್ಲಿ ಉತ್ತಮ ಪ್ರಚಾರ ನಡೆಸಿದ್ದ ಎಎಪಿ, ಎರಡಂಕಿ ಸ್ಥಾನ ಪಡೆಯುವುದು ಕಷ್ಟವೆಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು.

ಇಷ್ಟಾಗಿಯೂ ಹೊಸ ಪಕ್ಷವಾಗಿ, ಬಿಜೆಪಿ ಅಬ್ಬರದ ನಡುವೆ ಗುಜರಾತ್‌’ನಲ್ಲಿ ಎಎಪಿ ಬೆಳವಣಿಗೆ ಆಶಾದಾಯಕವಾಗಿದೆ.

ಹಿಂದಿನ ಲೇಖನಗನ್’ಮ್ಯಾನ್ ಜೊತೆಗಿದ್ದರು ಜವಳಿ ಉದ್ಯಮಿ ಹತ್ಯೆ
ಮುಂದಿನ ಲೇಖನಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಜಯ: ಹಾಲಿ ಸಿಎಂ ಜೈರಾಮ್​ ಠಾಕೂರ್​ ಗೆಲುವು