ಮನೆ ರಾಜ್ಯ ರಾಜ್ಯಪಾಲರಿಗೆ ಕಾಂಗ್ರೆಸ್ ವಿರುದ್ಧ ದೂರು ನೀಡಲು ಬಿಜೆಪಿ ನಿರ್ಧಾರ: ಕೆ. ಗೋಪಾಲಯ್ಯ

ರಾಜ್ಯಪಾಲರಿಗೆ ಕಾಂಗ್ರೆಸ್ ವಿರುದ್ಧ ದೂರು ನೀಡಲು ಬಿಜೆಪಿ ನಿರ್ಧಾರ: ಕೆ. ಗೋಪಾಲಯ್ಯ

0

ಮಂಡ್ಯ: ಸೋಮವಾರ ಗಾಂಧಿ ಪ್ರತಿಮೆಯಿಂದ ಹೊರಟು ರಾಜ್ಯಪಾಲರಿಗೆ ಕಾಂಗ್ರೆಸ್ ವಿರುದ್ಧ ದೂರು ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಮಾಜಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಪಕ್ಷದಿಂದ ಅಹೋರಾತ್ರಿ ಧರಣಿ ನಡೆಯುತ್ತಿತ್ತು, ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ನಮ್ಮ ನಾಯಕರು ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿಲ್ಲ. ಕಾಂಗ್ರೆಸ್ ಸರ್ಕಾರ ಎಟಿಎಂ‌ ಕಲೆಕ್ಟ್ ಮಾಡಿ‌ ಲೂಟಿ ಹೊಡೆಯುತ್ತಿದೆ ಎಂದು ಕಿಡಿಕಾರಿದರು.

ಕೆಂಪಣ್ಣ ತಾಕತ್ ಇದ್ರೆ ಲಂಚ ಯಾರಿಗೆ ಕೊಟ್ಟಿದ್ದೀರ ಎಂದು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದರು.

ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.  ಸರ್ಕಾರಿ ಅಧಿಕಾರಿಗಳೇ ರಾಜ್ಯಪಾಲರಿಗೆ ದೂರು ಮಾಡಿರೋದು ಇತಿಹಾಸದಲ್ಲಿ ನಡೆದಿಲ್ಲ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆ ಮುಂಚೆ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಲು ಕಾಂಗ್ರೆಸ್ ಗುರಿ ಇಟ್ಟಿದೆ. ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯಪಾಲರು ಕೃಷಿ ಸಚಿವರಿಂದ ರಾಜಿನಾಮೆ ಪಡೆದು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಇಡಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ. ಈ ಬಗ್ಗೆ ರಾಜ್ಯಪಾಲರ ಗಮನ ಸೆಳೆಯುತ್ತೇವೆ. ನಮ್ಮ ಸರ್ಕಾರ ಇದ್ದ ಸಂಧರ್ಭದಲ್ಲಿ ಗುತ್ತಿಗೆದಾರರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಸೋತಿರುವ ಶಾಸಕರು, ಗೆದ್ದಿರುವ ಶಾಸಕರಿಗೆ ಲಂಚ ಕೊಟ್ಟಿದ್ರೆ ತಾಕತ್ ಇಂದ್ರೆ ಬಹಿರಂಗ ಗೊಳಿಸಿ. ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ತಾಕತ್ ಇದ್ರೆ ಲಂಚ ಯಾರಿಗೆ ಕೊಟ್ಟಿದ್ದೀರ ಬಹಿರಂಗಪಡಿಸಿ ಎಂದು ಸವಾಲ್ ಹಾಕಿದ್ದಾರೆ.

ಮಹಾನಗರ ಪಾಲಿಕೆ ಕಛೇರಿಗೆ ಬೆಂಕಿ‌ ಬಿದ್ದಿದೆ ಮುಖ್ಯಮಂತ್ರಿ, ಬಿಜೆಪಿ ಈ ಕೆಲಸ ಮಾಡಿದೆ ಎಂದು ಹೇಳ್ತಿದ್ದಾರೆ. ತನಿಕೆ ಮಾಡಿಸಿ ನಿಮ್ದೆ ಸರ್ಕಾರ ಇದೆ. ಬಿಜೆಪಿ ರಾಜ್ಯದಲ್ಲಿ ಜನರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡ್ತೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಅಂತ ಹೇಳುತ್ತಿದ್ದಾರೆ. ಈವತ್ತಿಗೂ 80 ಕೋಟಿ ಜನರಿಗೆ ಕೊರೊನಾ ಬಂದಂತ ಸಂದರ್ಭದಲ್ಲಿ ಐದು ಕೆ ಜಿ ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿಯವರು. ಕೇಂದ್ರ ಸರ್ಕಾರ ಕೇಳಿ ಮಾತು ಕೊಟ್ಟಿದ್ರಾ ನೀವು ಎಂದು ಪ್ರಶ್ನಿಸಿದರು.

ಇಡೀ ದೇಶದ ಎಲ್ಲಾ ಜನರಿಗೂ ಕೇಂದ್ರ ಸರ್ಕಾರ ಉಚಿತ ಅಕ್ಕಿ ಕೊಡ್ತಿದೆ. ರಾಗಿ ಗೆ ಬೆಂಬಲ ಕೊಡ್ತಿರೋದು ಕೇಂದ್ರ ಸರ್ಕಾರ. ಬೆಳೆಗಳ ಬೆಲೆ ಹೆಚ್ಚು ಮಾಡಿ ರೈತರ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ. ಮೈಷುಗರ್ ಕಾರ್ಖಾನೆಗೆ ಹಣ ಬಿಡುಗಡೆ ಮಾಡಿದ್ದು ಯಡಿಯೂರಪ್ಪ ಸರ್ಕಾರ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮುಂದುವರೆಯುತ್ತಾರೆ ಎಂದು ಹೇಳಿದರು.

ಹಿಂದಿನ ಲೇಖನಸಿಎಂ ಸಿದ್ದರಾಮಯ್ಯ ಜನ್ಮದಿನ: ಕಾಂಗ್ರೆಸ್ ಭವನದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
ಮುಂದಿನ ಲೇಖನವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ  ಮೇಲೆ ಪೊಲೀಸರ ದಾಳಿ: ಫೆಬ್ರವರಿಯಲ್ಲೇ ‘ಸವಾಲ್ ಪತ್ರಿಕೆ’ ದೂರು ನೀಡಿದ್ದರೂ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆ