Saval TV on YouTube
ಮೈಸೂರು: ಬಿಜೆಪಿಯವರದ್ದು ಕೋಮುವಾದ ರಾಜಕೀಯ. ಧರ್ಮ ಬಿಟ್ಟು ರಾಜಕೀಯ ಮಾಡಲು ಬಿಜೆಪಿಯವರಿಗೆ ಬರಲ್ಲ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದರೇ ಹಿಂದೂಗಳ ಹತ್ಯೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಮ್ಮ ತಂದೆ ಕಾಲದಲ್ಲಿ ಹಿಂದೂ ಗಳ ಹತ್ಯೆಯಾಗಿಲ್ಲ. ಬಿಜೆಪಿಯವರು ಪೊಳ್ಳು ಹಿಂದೂಗಳು. ನಾವು ನಿಜವಾದ ಹಿಂದೂಗಳು. ಬಿಜೆಪಿಯವರು ಹಿಂದೂಗಳ ಹತ್ಯೆ ಮಾಡಿಸುತ್ತಾರೆ. ಧರ್ಮ ಧರ್ಮಗಳ ನಡುವೆ ಗಲಾಟೆ ಆಗಲಿ ಅನ್ನೋ ಕಾರಣಕ್ಕೆ ಹತ್ಯೆ ಮಾಡಿಸುತ್ತಾರೆ. ಧರ್ಮ ಧರ್ಮ ಎತ್ತಿಕಟ್ಟಿ ರಾಜಕೀಯ ಲಾಭ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳಿಗೆ ಬಿಜೆಪಿ ರಕ್ಷಣೆ ಕೊಡಲ್ಲ. ಶಾಂತಿ ನೆಮ್ಮದಿ ಇರಬೇಕಾದರೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ತೊಂದರೆಯಾಗಲ್ಲ ಎಂದು ಹೇಳಿದರು.














