ಮನೆ ತಂತ್ರಜ್ಞಾನ ನೂತನ ಸ್ಮಾರ್ಟ್’ಫೋನ್ ಬಿಡುಗಡೆ ಮಾಡಿದ ವಿವೋ

ನೂತನ ಸ್ಮಾರ್ಟ್’ಫೋನ್ ಬಿಡುಗಡೆ ಮಾಡಿದ ವಿವೋ

0

ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್‌’ಫೋನ್ ಮತ್ತು ಗ್ಯಾಜೆಟ್ ತಯಾರಿಕ ಸಂಸ್ಥೆ ವಿವೊ, ವೈ ಸರಣಿಯಲ್ಲಿ ಆಕರ್ಷಕ ಮಾದರಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ನೂತನ ವಿವೊ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, 6.51 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದರಲ್ಲಿದೆ.ಒಕ್ಟಾ ಕೋರ್ ಮೀಡಿಯಾಟೆಕ್ ಹೀಲಿಯೊ ಪಿ22 ಪ್ರೊಸೆಸರ್, 5000mAh ಬ್ಯಾಟರಿ ಇದರ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.

ವಿವೊ Y02 ಸ್ಮಾರ್ಟ್‌ಫೋನ್‌ನಲ್ಲಿ 3GB RAM + 32GB ಇದ್ದು, ಇಂಡೋನೇಷ್ಯಾ ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ದೇಶದಲ್ಲಿ ಅಂದಾಜು ₹8000 ದರ ಇರಲಿದೆ.

ವಿವೊ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಕಾಸ್ಮಿಕ್ ಗ್ರೇ ಮತ್ತು ಆರ್ಕಿಡ್ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ನೂತನ ಸ್ಮಾರ್ಟ್‌ಫೋನ್ ಲಭ್ಯವಾಗಲಿದ್ದು, ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ವಿವೊ ಬಹಿರಂಗಪಡಿಸಿಲ್ಲ.

ಹಿಂದಿನ ಲೇಖನಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಇಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌
ಮುಂದಿನ ಲೇಖನಬಿಜೆಪಿಯವರದ್ದು ಕೋಮುವಾದ ರಾಜಕೀಯ: ಯತೀಂದ್ರ ಸಿದ್ಧರಾಮಯ್ಯ