ಮನೆ ರಾಜ್ಯ ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ: ಪ್ರಾಣಾಪಾಯದಿಂದ ಸವಾರರು ಪಾರು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ: ಪ್ರಾಣಾಪಾಯದಿಂದ ಸವಾರರು ಪಾರು

0

ಚಾರ್ಮಾಡಿ: ರಸ್ತೆಯಲ್ಲಿ ಭಾರಿ ಮಂಜು ಆವರಿಸಿದ್ದು ಈ ವೇಳೆ ರಸ್ತೆ ಮಧ್ಯದಲ್ಲಿ ಆನೆಯೊಂದು ಗೋಚರಿಸಿದೆ ಗಾಬರಿಗೊಂಡ ಬೊಲೆರೋ ಚಾಲಕ ಚರಂಡಿಗೆ ಇಳಿಸಿದ್ದಾನೆ.

Join Our Whatsapp Group

ಚಾರ್ಮಾಡಿ ಘಾಟಿಯ 8-9ನೇ ತಿರುವಿನ ಮಧ್ಯೆ ಘಟನೆ ನಡೆದಿದ್ದು ರಾತ್ರಿ ಹೊತ್ತು ದಟ್ಟ ಮಂಜು ಆವರಿಸಿದ ಪರಿಣಾಮ ಚಾಲಕನಿಗೆ ರಸ್ತೆ ಸರಿಯಾಗಿ ಗೋಚರವಾಗಲಿಲ್ಲ. ಈ ವೇಳೆ ಏಕಾಏಕಿ ರಸ್ತೆ ಮಧ್ಯೆ ಆನೆಯೊಂದು ಕಂಡುಬಂದಿದೆ ಈ ವೇಳೆ ಜೀಪಿನಲ್ಲಿದ್ದವರು ಗಾಬರಿಗೊಂಡಿದ್ದಾರೆ ಅಲ್ಲದೆ ಆನೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ.

ಜೀಪಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು ಆನೆ ಜೀಪಿನಲ್ಲಿದ್ದವರ ಮೇಲೆ ದಾಳಿ ಮಾಡದೇ ಕಾಡಿನತ್ತ ಪ್ರಯಾಣ ಬೆಳೆಸಿದೆ.

ಹಿಂದಿನ ಲೇಖನಬೆಳಗಾವಿ: ಮೊಸಳೆ ದಾಳಿಗೆ ರೈತ ಬಲಿ
ಮುಂದಿನ ಲೇಖನಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡರನ್ನು ಕಣಕ್ಕಿಳಿಸಿದ ಕಾಂಗ್ರೆಸ್