ಮನೆ ರಾಜ್ಯ ಲಿವ್-ಇನ್-ರಿಲೇಶನ್‌ ಶಿಪ್‌ ಮಹಿಳೆಗೆ ರಕ್ಷಣೆ ನೀಡಲು ನಿರಾಕರಿಸಿದ ಹೈಕೋರ್ಟ್

ಲಿವ್-ಇನ್-ರಿಲೇಶನ್‌ ಶಿಪ್‌ ಮಹಿಳೆಗೆ ರಕ್ಷಣೆ ನೀಡಲು ನಿರಾಕರಿಸಿದ ಹೈಕೋರ್ಟ್

0

ಲಕ್ನೋ: ಲಿವ್-ಇನ್-ರಿಲೇಶನ್‌ ಶಿಪ್‌ ನಲ್ಲಿರುವ ಮಹಿಳೆಗೆ ರಕ್ಷಣೆ ನೀಡಲು ನಿರಾಕರಿಸಿರುವ ಅಲಹಾಬಾದ್ ಹೈಕೋರ್ಟ್, ಇಂತಹ ಸಂಬಂಧಗಳಿಗೆ ರಕ್ಷಣೆ ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನಮ್ಮ ಲಿವ್-ಇನ್- ರಿಲೇಶನ್‌ ಪ್ ಗೆ ಪತಿ ತೊಂದರೆ ಕೊಡದಂತೆ ಆದೇಶಿಸಬೇಕು ಎಂಬ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 2 ಸಾವಿರ ರೂ.ದಂಡ ವಿಧಿಸಿದೆ.

25 ವರ್ಷದ ಹಿಂದೂ ಯುವಕನ ಜತೆ ವಾಸವಿರುವ 26 ವರ್ಷದ ಮುಸ್ಲಿಂ ಮಹಿಳೆ ತನ್ನ ಪತಿ ತನಗೆ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದಾನೆ. ಹೀಗಾಗಿ 5 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಆದ್ದರಿಂದ ಪತಿಯಿಂದ ನನಗೆ ರಕ್ಷಣೆ ಕೊಡಿಸಬೇಕು, ತನ್ನ ನೆಮ್ಮದಿಯ ಜೀವನಕ್ಕೆ ತೊಂದರೆ ಕೊಡದಂತೆ ಆದೇಶಿಸಬೇಕು ಎಂದು ಕೋರಿದ್ದರು.

ಈ ಮನವಿ ತಿರಸ್ಕರಿಸಿರುವ ನ್ಯಾಯಮೂರ್ತಿ ರೇಣು ಅಗರ್ವಾಲ್, ಅರ್ಜಿದಾರ ಮಹಿಳೆ ಮದುವೆಯಾಗಿದ್ದು, ಡಿವೋರ್ಸ್ ಕೂಡ ಪಡೆದಿಲ್ಲ. ವಿವಾಹಿತ ಮುಸ್ಲಿಂ ಮಹಿಳೆಯು ವಿವಾಹೇತರ ಸಂಬಂಧ ಹೊಂದುವುದು ಅಥವಾ ಲಿವ್-ಇನ್ ಸಂಬಂಧದಲ್ಲಿ ಇರುವುದು ಕಾನೂನು ಸಮ್ಮತವಲ್ಲ. ಇಂತಹ ಸಂಬಂಧವು ಇಸ್ಲಾಂನಲ್ಲಿ ಝಿನಾ(ವ್ಯಭಿಚಾರ) ಮತ್ತು ಹರಾಮ್ (ನಿಷಿದ್ಧ) ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಹಿಂದಿನ ಲೇಖನಕಾಂಗ್ರೆಸ್ ಮುಂದುವರೆದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದರು ಆಶ್ಚರ್ಯವಿಲ್ಲ: ಪ್ರತಾಪ್​ ಸಿಂಹ
ಮುಂದಿನ ಲೇಖನನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಮರಳು ಮಾಡಿ ಅಧಿಕಾರ ನಡೆಸುವುದಿಲ್ಲ: ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ: ಸಿಎಂ