ಸ್ಯಾಂಡಲ್ವುಡ್ ನಟ ಜೋಗಿ ಪ್ರೇಮ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ‘ಕೆಡಿ’ ಚಿತ್ರ ಮೂಡಿ ಬರುತ್ತಿದೆ. ಈ ವಾರದ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಈಗ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ಅವರು ‘ಜೋಗಿ’ ಹಿಂದಿ ರಿಮೇಕ್ ಬಗ್ಗೆ ಮಾತನಾಡಿದ್ದಾರೆ. ಈಗಲೂ ಆ ಬಗ್ಗೆ ಸಾಜಿದ್ ಕೇಳುತ್ತಾರೆ ಎಂದು ಪ್ರೇಮ್ ಅವರು ಹೇಳಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದಕ್ಷಿಣ ಭಾರತದ ನಿರ್ದೇಶಕರ ಬಗ್ಗೆ ಪೀತಿ ಮೂಡಿದ್ದು ಇಲ್ಲಿಯ ನಿರ್ದೇಶಕರು ಹೆಚ್ಚು ಮಸಾಲಭರಿತ ಸಿನಿಮಾ ಮಾಡುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬಿದ್ದಾರೆ. ಹೀಗಾಗಿ ಜೋಗಿ ಪ್ರೇಮ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಅವರಿಗೆ ಇದೆ ಎಂದು ಈ ಬಗ್ಗೆ ಪ್ರೇಮ್ ಮಾಹಿತಿ ನೀಡಿದ್ದಾರೆ. ‘ಸಾಜಿದ್ ನಾಡಿಯದ್ವಾಲಾ ಕರೆದು ಸಿನಿಮಾ ಮಾಡೋಣ ಎಂದಿದ್ದರು.
ಜೋಗಿ ರಿಮೇಕ್ ಮಾಡೋಣ ಎಂಬುದು ಅವರ ಆಸೆ ಆಗಿತ್ತು. ಸಲ್ಮಾನ್ ಖಾನ್ ಕೇಳ್ತಾ ಇದ್ದಾರೆ ಎಂದೂ ಹೇಳಿದ್ದರು. ನಾನು ಅದು ಆಗುವುದಿಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ. ಜೋಗಿ ರಿಲೀಸ್ ಆಗಿ 2 ದಶಕ ಕಳೆದಿದೆ. ಈಗ ಅದನ್ನು ರಿಮೇಕ್ ಮಾಡೋದು ಅಸಾಧ್ಯ ಅಂತ ಹೇಳಿದ್ದೇನೆಯೆಂದು ಪ್ರೇಮ್ ವಿವರಿಸಿದ್ದಾರೆ.
ಈ ಕುರಿತು ಸಲ್ಮಾನ್ ಖಾನ್ ಅವರ ತಂಡದಿಂದ ಜೋಗಿ ಪ್ರೇಮ್ಗೆ ಈ ರೀತಿಯ ಆಫರ್ ಬಂದಿತ್ತು ಎಂಬ ಸುದ್ದಿ ಈ ಮೊದಲೇ ವೈರಲ್ ಆಗಿತ್ತು. ಆದರೆ ಪ್ರೇಮ್ ಅವರು ಈ ವಿಷಯದ ಬಗ್ಗೆ ಮುಂದುವರಿದಿರಲಿಲ್ಲ ಏನ್ನಬಹುದು. ಈ ವಿಷಯದಲ್ಲಿ ಪ್ರೇಮ್ ಅವರಿಗೆ ಈಗ ಪದೇ ಪದೇ ಆಫರ್ ಬರುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.














