ಮನೆ Uncategorized ಗಂಗೂಲಿ ವ್ಯಾಜ್ಯ: ನ್ಯಾಯಾಲಯದ ಆದೇಶ ಪಾಲಿಸದ ಕಂಪನಿಗಳಿಗೆ ಬಾಂಬೆ ಹೈಕೋರ್ಟ್ ನಿಂದ ಶೋಕಾಸ್ ನೋಟಿಸ್

ಗಂಗೂಲಿ ವ್ಯಾಜ್ಯ: ನ್ಯಾಯಾಲಯದ ಆದೇಶ ಪಾಲಿಸದ ಕಂಪನಿಗಳಿಗೆ ಬಾಂಬೆ ಹೈಕೋರ್ಟ್ ನಿಂದ ಶೋಕಾಸ್ ನೋಟಿಸ್

0

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಮಧ್ಯಸ್ಥಿಕೆ ವ್ಯಾಜ್ಯ ಹೊಂದಿರುವ ಎರಡು ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಶೋಕಾಸ್‌ ನೋಟಿಸ್ ಜಾರಿ ಮಾಡಿದೆ.

ಕಂಪನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ಕೇಳಿದೆ. ಮ್ಯಾನೇಜ್‌ಮೆಂಟ್‌ ಕಂಪೆನಿಗಳಾದ ಪರ್ಸೆಪ್ಟ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ ಮತ್ತು ಪರ್ಸೆಪ್ಟ್‌ ಡಿ ಮಾರ್ಕ್‌ (ಇಂಡಿಯಾ) ಲಿಮಿಟೆಡ್‌ಗಳು ₹ 35 ಕೋಟಿ ಮೊತ್ತವನ್ನು ಸೌರವ್‌ ಗಂಗೂಲಿ ಅವರಿಗೆ ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿಯೊಂದು ನೀಡಿದ್ದ ತೀರ್ಪನ್ನು ಜಾರಿಗೆ ತರದೇ ಇರುವುದರಿಂದ ಈ ನೋಟಿಸ್‌ ನೀಡಲಾಗಿದೆ.

ಹಿಂದಿನ ಲೇಖನನಯವಾದ ಮಾತಿನಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳುವ ನಿಪುಣರು ಈ 4 ರಾಶಿಯವರು
ಮುಂದಿನ ಲೇಖನಸಂಪುಟ ದರ್ಜೆ ಸಚಿವರಿಗೆ ದೊರಕುವ ಎಲ್ಲಾ ಸೌಲಭ್ಯಗಳು ವಿರೋಧ ಪಕ್ಷದ ನಾಯಕರಿಗೆ ಲಭ್ಯ