ಮನೆ ಅಪರಾಧ ಮ್ಯಾಟ್ರಿಮೋನಿಯಲ್​ ಸೈಟ್’​ನಲ್ಲಿ ಪರಿಚಯವಾದ ಮಹಿಳೆ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಸಾಫ್ಟ್​​’ವೇರ್ ಇಂಜಿನಿಯರ್​

ಮ್ಯಾಟ್ರಿಮೋನಿಯಲ್​ ಸೈಟ್’​ನಲ್ಲಿ ಪರಿಚಯವಾದ ಮಹಿಳೆ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಸಾಫ್ಟ್​​’ವೇರ್ ಇಂಜಿನಿಯರ್​

0

ಬೆಂಗಳೂರು: ಬೆಂಗಳೂರಿನ ಸಾಫ್ಟ್​​’ವೇರ್ ಇಂಜಿನಿಯರ್​ ಮ್ಯಾಟ್ರಿಮೋನಿಯಲ್​ ಸೈಟ್’​ನಲ್ಲಿ ಪರಿಚಯವಾಗಿದ್ದ ಮಹಿಳೆಯನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

Join Our Whatsapp Group

ಹಣ ಕಳೆದುಕೊಂಡ ಮಾರತ್ತಹಳ್ಳಿಯ 48 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಾರತ್ತಹಳ್ಳಿ ಸಮೀಪದ ಮುನ್ನೆಕೊಲ್ಲಲ್ ನಿವಾಸಿ ಸಲ್ಮಾನ್ (ಹೆಸರು ಬದಲಿಸಲಾಗಿದೆ) ವೈವಾಹಿಕ ಸೈಟ್​’ನಲ್ಲಿ ತನ್ನ ಪ್ರೊಫೈಲ್ ಅಪ್ಲೋಡ್ ಮಾಡಿದ್ದ. ಈ ಸೈಟ್​’ನಲ್ಲಿ ಫಾತಿಮಾ ಮುಹಮ್ಮದ್​ ಎಂಬ ಖಾತೆಯಿಂದ ಏಪ್ರಿಲ್ ಮೊದಲ ವಾರದಲ್ಲಿ ಸಲ್ಮಾನ್’​ನನ್ನು ಸಂಪರ್ಕಿಸಲಾಗಿದೆ. ತಾನು ಲಂಡನ್​’ನಲ್ಲಿ ನೆಲೆಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳುತ್ತೇನೆ ಎಂದು ಹೇಳಿಕೊಂಡಿದ್ದಳು.

ಹೀಗೆ ಪರಿಚಯ ಮಾಡಿಕೊಂಡ ಫಾತಿಮಾ, ಸಲ್ಮಾನ್ ಮೇಲೆ ಆಸಕ್ತಿಯನ್ನು ತೋರಿದ್ದಾಳೆ. ಹೀಗೆ ಪರಸ್ಪರ ಮಾತುಕತೆ ನಡೆಯುತ್ತಿದ್ದಾಗ ಸಲ್ಮಾನ್​’ಗೆ ಏಪ್ರಿಲ್ 11ರಂದು ಮಹಿಳೆಯೊಬ್ಬರು ಕರೆ ಮಾಡಿ ತಾನು ಕಸ್ಟಮ್ಸ್ ಅಧಿಕಾರಿ ಮನಿಷಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದರು. ಫಾತಿಮಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿದೇಶಿ ಕರೆನ್ಸಿಯನ್ನು ತಂದಿದ್ದರು ಮತ್ತು ಕಸ್ಟಮ್ಸ್ ಅಧಿಕಾರಿಗಳು ಅದನ್ನು ಅವರ ಕೆಲವು ದಾಖಲೆಗಳೊಂದಿಗೆ ವಶಪಡಿಸಿಕೊಂಡಿದ್ದಾರೆ ಎಂದು ಮನಿಷಾ ಸಲ್ಮಾನ್’​ಗೆ ತಿಳಿಸಿದ್ದಾರೆ.

ಮನಿಷಾ ತನ್ನ ಹಣ ಮತ್ತು ಕಾಗದಪತ್ರಗಳನ್ನು ಬಿಡುಗಡೆ ಮಾಡಲು ತನ್ನ ಪರವಾಗಿ ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸುವಂತೆ ಸಲ್ಮಾನ್​’ಗೆ ಸೂಚಿಸಿದ್ದಾಳೆ. ಅದರಂತೆ ಸಲ್ಮಾನ್ ಒಟ್ಟು 34,40,700 ರೂ.ಗಳನ್ನು ಮಹಿಳೆ ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಏಪ್ರಿಲ್ 19ರಿಂದ ಮನಿಷಾ ಆಗಲಿ ಅಥವಾ ಫಾತಿಮಾ ಆಗಲಿ ಸಂಪರ್ಕಕ್ಕೆ ಸಿಕ್ಕಿಲ್ಲ.

ಕೊನೆಗೆ ತಾನು ಸೈಬರ್ ಅಪರಾಧಿಗಳ ಮೋಸದ ಜಾಲಕ್ಕೆ ಬಲಿಯಾಗಿರುವುದು ತಿಳಿದು ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.

ವೈಟ್​’ಫೀಲ್ಟ್​ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಿಂದಿನ ಲೇಖನಎತ್ತಿನಗಾಡಿ ಏರಿ ಮತದಾನ ಜಾಗೃತಿ
ಮುಂದಿನ ಲೇಖನಗ್ಯಾಸ್ಟ್ರಿಕ್’ಗೆ ಸಿಂಪಲ್ ಮನೆಮದ್ದುಗಳು