ಮನೆ ರಾಷ್ಟ್ರೀಯ ಹೊತ್ತಿ ಉರಿದ ಬಸ್ : 10 ಮಂದಿ ಸಜೀವ ದಹನ, 24 ಜನರಿಗೆ ಗಾಯ

ಹೊತ್ತಿ ಉರಿದ ಬಸ್ : 10 ಮಂದಿ ಸಜೀವ ದಹನ, 24 ಜನರಿಗೆ ಗಾಯ

0

ನಾಸಿಕ್(Nasik): ಬಸ್’ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್’ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮಹಾರಾಷ್ಟ್ರದ ನಾಸಿಕ್ ನಂದೂರ್ ನಾಕಾದ ಔರಂಗಾಬಾದ್ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ  ಖಾಸಗಿ ಬಸ್ -ಕಂಟೈನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ.

ಮುಂಜಾನೆ ಸಂಭವಿಸಿದ ದುರ್ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದಾರೆ.  ಸ್ಲೀಪರ್ ಕೋಚ್ ಬಸ್’ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ. ಸಾವಿಗೀಡಾದ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಬಸ್ ಪ್ರಯಾಣಿಕರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 ಲಕ್ಷ ರೂ. ಪರಿಹಾರ ಘೋಷಣೆ: ನಾಸಿಕ್‌ನಲ್ಲಿ ನಡೆದ ಬಸ್​ ದುರಂತದಲ್ಲಿ 14 ಜನರು ಪ್ರಾಣ ಕಳೆದುಕೊಂಡಿದ್ದಾರೆ. 21 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಸರ್ಕರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಹಿಂದಿನ ಲೇಖನವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 62 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಅಪರಾಧ ಪ್ರಕರಣ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ: ಹೆಡ್ ಕಾನ್ಸ್’ಟೇಬಲ್ ಬಂಧನ, ಇನ್ಸ್’ಪೆಕ್ಟರ್ ಪರಾರಿ