ಮನೆ ಸುದ್ದಿ ಜಾಲ ಸಚಿವ ರಾಮುಲು ಮನೆಗೆ ಕ್ಯಾಬ್ ಚಾಲಕರ ಮುತ್ತಿಗೆ

ಸಚಿವ ರಾಮುಲು ಮನೆಗೆ ಕ್ಯಾಬ್ ಚಾಲಕರ ಮುತ್ತಿಗೆ

0

ಬೆಂಗಳೂರು: ತಮ್ಮ ವಿವಿಧ ಬೇಡಿಕಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ಯಾಬ್ ಚಾಲಕರು  ರಾಜ್ಯ ಸಾರಿಗೆ ಸಚಿವ ಬಿ.ಶ್ರೀ ರಾಮುಲು ಮನೆಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಸಿಬ್ಬಂದಿ ಸಚಿವರ ಮನೆ ಮುಂದೆ ನೂರಾರು ಕ್ಯಾಬ್ ನಿಲ್ಲಿಸಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆವೆನ್‌ ಮಿನಿಸ್ಟರ್ ಕ್ವಾಟ್ರಸ್ ಮನೆಗೆ ಮುತ್ತಿಗೆ ಹಾಕಿರುವ ಚಾಲಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ತಮ್ಮ ಕ್ಯಾಬ್​ಗಳನ್ನು ತಂದು ಸಚಿವರ ಮನೆ ಬಾಗಿಲಿನಲ್ಲಿ ನಿಲ್ಲಿಸಿದ್ದು ಎಲ್ಲರೂ ಸ್ಥಳದಲ್ಲಿಯೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಈಗಾಗಲೇ ಬೈಕ್ ಟ್ಯಾಕ್ಸಿಗಳು ಬಂದ ಕಾರಣ ಕ್ಯಾಬ್​ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಮುಖ್ಯವಾಗಿ ಆಫೀಸ್ ಹಾಗೂ ಇತರ ಕಾರಣಗಳಿಗೆ ಹೊರಗೆ ಓಡಾಡುವವರು ಆರಾಮಾವಗಿ ಟೂ ವೀಲ್ಹರ್ ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಬೈಕ್  ಆಗಿರುವ ಕಾರಣ ಟ್ರಾಫಿಕ್​ನ ಸಮಸ್ಯೆಯೂ ಅಷ್ಟಾಗಿ ಕಾಡದೆ, ಕಡಿಮೆ ಬೆಲೆಯಲ್ಲಿ ಪ್ರಯಾಣಿಸಬಹುದಾದ ಆಯ್ಕೆ ಜನರಿಗೆ ಲಭ್ಯವಾಗಿದೆ. ಹಾಗಾಗಿ ಕ್ಯಾಬ್​ಗಳನ್ನು ಅವಲಂಬಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ.
 ರ್ಯಾಪಿಡೋ ಬೈಕ್ ಟ್ಯಾಕ್ಸಿ ಕೂಡಲೇ ಬಂದ್ ನಿಲ್ಲಿಸಬೇಕು,  ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಕೂಡಲೇ ಹಿಂಪಡೆಯಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.
ಪ್ರತಿಭಟನೆ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಲು ಪ್ರಯತ್ನಪಟ್ಟಿದ್ದಾರೆ. ಕ್ಯಾಬ್ ಗಳನ್ನು ಸಚಿವರ ಮನೆಯ ಮುಂದಿನಿಂದ ತೆರವು ಮಾಡುವಂತೆ ಪೊಲೀಸರು ಸಿಬ್ಬಂದಿಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಶ್ರೀ ರಾಮುಲು ಬಂದು ನಮ್ಮ ಬೇಡಿಕೆಗಳನ್ನು ಈಡೆರಿಸುವವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.

ಹಿಂದಿನ ಲೇಖನಮೇವು ಹಗರಣ; ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ಪ್ರಕಟಿಸಿದ  ವಿಶೇಷ ಸಿಬಿಐ ಕೋರ್ಟ್
ಮುಂದಿನ ಲೇಖನಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ