ಮನೆ ಕಾನೂನು ಮೇವು ಹಗರಣ; ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ಪ್ರಕಟಿಸಿದ  ವಿಶೇಷ ಸಿಬಿಐ ಕೋರ್ಟ್

ಮೇವು ಹಗರಣ; ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ಪ್ರಕಟಿಸಿದ  ವಿಶೇಷ ಸಿಬಿಐ ಕೋರ್ಟ್

0

ರಾಂಚಿ: ಬಹುಕೋಟಿ ರೂಪಾಯಿ ಮೇವು ಹಗರಣ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರನ್ನು ದೋಷಿ  ಎಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ.

ಇಂದು ಬೆಳಗ್ಗೆ ಸಿಬಿಐ ವಿಶೇಷ ನ್ಯಾಯಾಲಯ ಮುಂದೆ ವಿಚಾರಣೆಗೆ ಲಾಲೂ ಪ್ರಸಾದ್ ಯಾದವ್ ಆಗಮಿಸಿದ್ದರು. 

ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಮತ್ತು ಅಂತಿಮ ತೀರ್ಪು ನೀಡಿದ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ಇತರ 75 ಆರೋಪಿಗಳೊಂದಿಗೆ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌ಕೆ ಶಶಿ ಅವರು 6 ಮಹಿಳೆಯರು ಸೇರಿದಂತೆ 24 ಆರೋಪಿಗಳನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಖುಲಾಸೆಗೊಳಿಸಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18 ರಂದು ಘೋಷಿಸಲಾಗುವುದು ಎಂದು ನ್ಯಾಯಾಲಯ ಇಂದು ತೀರ್ಪು ವೇಳೆ ಪ್ರಕಟಿಸಿದೆ.

ಹಿಂದಿನ ಲೇಖನಮಸೀದಿ ಹಾಗೂ ದರ್ಗಾದಲ್ಲೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕ ನಿಷೇಧ
ಮುಂದಿನ ಲೇಖನಸಚಿವ ರಾಮುಲು ಮನೆಗೆ ಕ್ಯಾಬ್ ಚಾಲಕರ ಮುತ್ತಿಗೆ