ಮನೆ ಅಂತಾರಾಷ್ಟ್ರೀಯ ಭಾರತದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್ ಹಂಚುತ್ತಿದ್ದಾರೆ: ಅಂಜು ಬಾಬಿ ಜಾರ್ಜ್ ಆರೋಪ

ಭಾರತದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್ ಹಂಚುತ್ತಿದ್ದಾರೆ: ಅಂಜು ಬಾಬಿ ಜಾರ್ಜ್ ಆರೋಪ

0

ಚಂಡೀಗಢ (Chandighad): ಭಾರತದ ಅಥ್ಲೀಟ್‌ಗಳು ವಿದೇಶಗಳಿಂದ ಬರುವಾಗ ನಿಷೇಧಿತ ಡ್ರಗ್ಸ್‌ಗಳನ್ನು ತಂದು ಇಲ್ಲಿನ ಇತರೆ ಅಥ್ಲೀಟ್‌ಗಳಿಗೆ ಹಂಚುತ್ತಿದ್ದಾರೆ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಉಪಾಧ್ಯಕ್ಷೆ, ಅಂಜು ಬಾಬಿ ಜಾರ್ಜ್‌ ಗಂಭೀರ ಆರೋಪ ಮಾಡಿದ್ದಾರೆ.

2 ದಿನಗಳ ಎಎಫ್‌ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ದೂರಿರುವ ಅಂಜು, ‘ಭಾರತದಲ್ಲಿ ನಿಷೇಧವಿರುವ ಹಲವು ಡ್ರಗ್ಸ್‌ಗಳನ್ನು ವಿದೇಶದಿಂದ ತರಲಾಗುತ್ತಿದೆ. ಕೇವಲ ಕೋಚ್‌ಗಳು ಮಾತ್ರವಲ್ಲದೇ ಹಲವು ಅಥ್ಲೀಟ್‌ಗಳು ಕೂಡಾ ತಮ್ಮ ಪ್ರದರ್ಶನ ಗುಣಮಟ್ಟವೃದ್ಧಿಸುವಂತಹ ಡ್ರಗ್ಸ್‌ಗಳನ್ನು ಇತರೆ ಅಥ್ಲೀಟ್‌ಗಳಿಗೆ ನೀಡುತ್ತಿದ್ದಾರೆ. ಈ ಬೆಳವಣಿಗೆ ಆತಂಕಕಾರಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅಥ್ಲೀಟ್‌ಗಳ ಪರೀಕ್ಷೆಯನ್ನು ಇನ್ನೂ ಕಠಿಣಗೊಳಿಸುತ್ತೇವೆ. ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ(ನಾಡಾ)ಕ್ಕೂ ಇದರ ಬಗ್ಗೆ ಮಾಹಿತಿ ನೀಡಿದ್ದು, ಪರೀಕ್ಷೆಗಳನು ಇನ್ನಷ್ಟುತೀವ್ರಗೊಳಿಸಲು ಸೂಚನೆ ನೀಡಿದ್ದೇವೆ ಎಂದರು.

ಉದ್ದೀಪನ ಮದ್ದು ಸೇವನೆಯಲ್ಲಿ ಜಾಗತಿಕ ಮಟ್ಟದಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ.

ಹಿಂದಿನ ಲೇಖನಸಿಧು ಮೂಸೆವಾಲಾ ಹತ್ಯೆ ಹೊಣೆ ಹೊತ್ತ ಕೆನಡಾ ಮೂಲದ ಗ್ಯಾಂಗ್ ಸ್ಟರ್
ಮುಂದಿನ ಲೇಖನಮುಸ್ಲಿಂ ಟೋಪಿ ಧರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ: 7 ಜನರ ವಿರುದ್ಧ ಎಫ್ ಐಆರ್