ಆಕಾಶದಲ್ಲಿ 270 ರಿಂದ 300 ಅಂಶಗಳಲ್ಲಿ ಭೂಮಧ್ಯ ರೇಖೆಯಿಂದ ದಕ್ಷಿಣದಲ್ಲಿ 20 ರಿಂದ 12 ಡಿಗ್ರಿವರೆಗೆ ಈ ರಾಶಿಯ ಸ್ಥಾನವಿರುವುದು. ಉತ್ತರಾಯಣದಲ್ಲಿ ಅರ್ಧ ದಕ್ಷಿಣಾಯಣದಲ್ಲಿ ಅರ್ಧವನ್ನು ರಾತ್ರಿಯಲ್ಲಿ ಕಾಣಬಹುದಾಗಿದೆ. ಜಲಮೃಗ ಅಂದರೆ ಮೊಸಳೆಯ ಆಕಾರ ಹೊಂದಿರುವುದು. ಈ ರಾಶಿಯ ಸ್ವಾಮಿ ಶನಿಗ್ರಹ ವಾಗಿರುವದು. ರಾಶಿಯಲ್ಲಿ ಉತ್ತರಾಷಾಡ ಶ್ರಾವಣ ಮತ್ತು ಧನಿಷ್ಠಾ ನಕ್ಷತ್ರದ ಭಾಗಗಳು ಸೇರುತ್ತವೆ ಈ ನಕ್ಷತ್ರಗಳಿಗೆ ಕ್ರಮವಾಗಿ ಸೂರ್ಯ ಚಂದ್ರ ಮಂಗಳರಿದ್ದಾರೆ.
ತ್ರಿಭುಜಾಕಾರದಲ್ಲಿರುವ ಈ ರಾಶಿಯು ಪೌರಾಣಿಕ ಕಥೆಗ್ನೆ ಸಂಬಂಧಿಸಿರುವುದು. ಕೆಲವೊಮ್ಮೆ ಜಲಮೃಗಕ್ಕೆ ಕೆಲವೊಮ್ಮೆ ಕುರಿಯ ಚಿಹ್ನೆಯನ್ನು ನೀಡಿದ್ದಾರೆ. ಸೂರ್ಯನು ಜನವರಿ 14 ರಿಂದ ಫೆಬ್ರವರಿ 15ರವರೆಗೆ ಈ ರಾಶಿಯಲ್ಲಿರುವನು.ಹಿಂದೂ ಮಾಸಗಳಂತೆ ಮಾಘ ಮಾಸದಲ್ಲಿರುವನು ಇಂಗ್ಲೀಷಿನಲ್ಲಿ ಇದಕ್ಕೆ ‘ಕೆಪ್ರಿಕಾರ್ನ ’ಎಂದು ಕರೆಯುವರು.
ಈ ರಾಶಿಯು ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಭೂಭಾಗ, ನದಿ ಅಥವಾ ಸಮುದ್ರದಲ್ಲಿ ತನ್ನ ಸ್ಥಾನವನ್ನು ನಿಶ್ಚಿತಗೊಳಿಸುವುದು. ಇದು ಹಳದಿ ಬಿಳಿವರ್ಣ ಪ್ರಿಯವಾದ ರಾಜೋಗುಣದ ಭೂಮಿತತ್ವವುಳ್ಳ ರಾಶಿಯಾಗಿದೆ. ರಾತ್ರಿ ಬಲಿಷ್ಠಾವಾದ ಜಲಚರ ವಾತಪ್ರಕೃತಿ ಶೂದ್ರ ಜಾತಿಯ ವ್ಯವಹಾರ ಕುಶಲ ಜನಪ್ರಿಯ ಲಘುಶರೀರದ ಭ್ರಮಣ ಶೀಲ ರಾಶಿಯೆನಿಸುವುದು. ಇದರ ನಿವಾಸ ಪಂಚಾಲದೇಶವಾಗಿದೆ. ಶರೀರದ ವಿಜ್ಞಾನದಂತೆ ಇದರ ಭಾಗವು ಮೊಣಕಾಲಿನ ಭಾಗದಲ್ಲಿರುವುದು, ಎಲುಬು ಮತ್ತು ಸಂಧಿಗಳಾಗಿವೆ.
ಸೂರ್ಯನು ಈ ರಾಶಿಯಲ್ಲಿದ್ದಾಗ ದಿನದ ಅವಧಿ ಹೆಚ್ಚಾಗುವುದು.ಈ ರಾಶಿಯ ದ್ರವ್ಯಗಳೆಂದರೆ ಸುವರ್ಣ ಲೋಹಗಳು, ಸೀಸ,ಕಂಚು, ತಾಮ್ರ, ಕೋಗಿಲೆ, ಕಬ್ಬು ಮುಂತಾದವು.ನಿರಂಕುಶ ಅಧಿಕಾರದ ಬಗೆಗೆ ಸಹ ಸಂಬಂಧ ಹೊಂದಿರುವುದು ಅಲ್ಬೇರಿಯಾ,ಮೆಕ್ಸಿಕೋ, ಬಲ್ಗೇರಿಯಾ ಬಂಗಾಳ ಪಂಜಾಬ ಪ್ರದೇಶಗಳೊಂದಿಗೆ ಈ ರಾಶಿಯು ಸಂಬಂಧ ಹೊಂದಿರುವದು.
ಈ ರಾಶಿಯಲ್ಲಿ ಜನಿಸಿದವರು ಉದ್ದ ಶರೀರದವರು, ಬಿಳಿ ಬಣ್ಣದವರು, ಸುಂದರ ಕಣ್ಣುಗಳಿರುವವರು ಮನನ ಶೀಲರು, ಸೇವಾಭಿಲಾಷಿಗಳು ಆಧ್ಯಾತ್ಮಿಕ ಪ್ರವೃತ್ತಿಯವರು ಧೈರ್ಯಶಾಲಿಗಳು, ತ್ಯಾಗಿಗಳು, ಗೃಹಸ್ಥ ಜೀವನದಲ್ಲಿ ಸಫಲರು ಆಗುವರು.
ಮಕರ ರಾಶಿಯವರು ಭಾವಜೀವಿಗಳಾಗುವರು. ಏಕಾಂತದಲ್ಲಿ ಸಿಡುಕಿನವರಾಗುವರು. ನಶಾವಸ್ತ್ರಗಳೊಂದಿಗೆ ಸಂಬಂಧ ಹೂಂದುವರು. ವ್ಯಾಪಾರ ನೀಲಕ್ಷ್ಯ ಮಾಡಿ ಕಷ್ಟಕ್ಕೀಡಾಗುವವರು. ರಂಗದಲ್ಲಿ ಆಸಕ್ತಿ ಹೊಂದಿರುತ್ತಾರೆ.ನಿರ್ಲಕ್ಷದಿಂದ ಅಪಮಾನ ಹೊಂದುವರು.
ಈ ಲಗ್ನದಲ್ಲಿ ಹುಟ್ಟಿದವರು ವಿಚಾರಶೀಲರು, ಆದರ್ಶ ಗುಣವುಳ್ಳವರು ವ್ಯವಸಾಯಿಗಳು ಆಗುವವರು.ಈ ರಾಶಿಯ ಸ್ವಾಮಿ ಶನಿಯಾದ್ದರಿಂದ ಈ ರಾಶಿಯವರು ಉತ್ತಮ ಆದರ್ಶ ಹೊಂದಿದ್ದರೂ, ನಿರಾಶೆ ಹೊಂದುವರು. ಸಫಲರಾದಲ್ಲಿ ಗುಪ್ರಚಾರರೂ, ಅಧಿಕಾರಿಗಳು, ಕಳ್ಳರು, ಅನೈತಿಕ ಕಾರ್ಯ ಮಾಡುವರು ಆಗುವರು. ಕೆಲಸಗಾರರು ಖನಿಜ ಉದ್ಯಮಲ್ಲಿ ಕೆಲಸ ಮಾಡುವವರು ಖಾಸಗೀ ಕೆಲಸ ಮಾಡುವವರೂ ಆಗುವವರು.
ರೈಲ್ವೆ ವಾಯುಯಾನ,ನೌಕಯಾನ, ವಾಹನಗಳೊಂದಿಗೆ ಸಂಬಂಧ ಹೊಂದಿರುವ ಈ ರಾಶಿಯವರು ಭ್ರಮಣಶೀಲರು ಆಗುವರು.ಸೂರ್ಯನು ಈ ರಾಶಿಯಲ್ಲಿ ಮಾಘಮಾಸದಲ್ಲಿರುವನು.ಆ ಸಮಯದಲ್ಲಿ ಅತಿಕೆಟ್ಟ ಫಲಗಳಾಗುವವು. ಅಸೆಬುರುಕರು,ಚಂಚಲರು ಜಗಳಗಂಟರು ಜನಿಸುವರು.
ಈ ರಾಶಿಯವರು ವಿನೋದ ಸ್ವಭಾವದವರು,ಆಡಂಬರ ಉಳ್ಳವರು ಸಂಗೀತ, ನೃತ್ಯ ಪ್ರೇಮಿಗಳು ಸಾಹಿತ್ಯಪ್ರಿಯರು ಉತ್ತಮ ಆರ್ದಿಕ ಸ್ಥಿತಿವುಳ್ಳವರು ಆಗುವರು ಕೃಶಶರೀರಗಳು,ವ್ಯವಹಾರಿಕರು, ಆಲಸಿಗಳು ಆಗುವರು ಬುದ್ಧಿ ಉತ್ತಮವಾಗಿರುವುದು. ಪರಿಶ್ರಮಿಗಳು ಈರ್ಷೆವುಳ್ಳವರು, ತಮ್ಮ ಮಾತನ್ನು ಸಮರ್ಪಿಸುವವರು ಆಗುತ್ತಾರೆ. ಮಕರರಾಶಿಯವರು ತಂದೆ ಹಾಗೂ ಇತರ ವ್ಯಕ್ತಿಗಳೊಂದಿಗೆ ಕೆಲವೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದುವರು.