ಮನೆ ರಾಜ್ಯ ಕಾರು – ಬಸ್ ನಡುವೆ ಅಪಘಾತ: 30ಕ್ಕೂ ಹೆಚ್ಚು ಮಂದಿಗೆ ಗಾಯ

ಕಾರು – ಬಸ್ ನಡುವೆ ಅಪಘಾತ: 30ಕ್ಕೂ ಹೆಚ್ಚು ಮಂದಿಗೆ ಗಾಯ

0

ಕಾರವಾರ(ಉತ್ತರಕನ್ನಡ): ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಪಲ್ಟಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಮಂಕಿ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.

Join Our Whatsapp Group

ಹೊನ್ನಾವರದ ಮಂಕಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದ್ದು, ಅಪಘಾತದಿಂದಾಗಿ ಕಾರು‌ ಹಾಗೂ ಬಸ್ ​ನಲ್ಲಿದ್ದವರು ಸೇರಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರು ಚಾಲಕನ‌ ಸ್ಥಿತಿ ಗಂಭೀರವಾಗಿದೆ.

ತಡರಾತ್ರಿ ಬ್ರೆಝಾ ಕಾರಿನಲ್ಲಿ ಸಾಗುತ್ತಿದ್ದ ಜಿ.ಪಂ.ನ ಗುತ್ತಿಗೆದಾರ ಮೋಹನ್ ನಾಯ್ಕ ಎಂಬುವವರು ಮಂಕಿಯ‌ಲ್ಲಿ ಒಳರಸ್ತೆಗೆ ಕಾರನ್ನು ಕ್ರಾಸ್​ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್, ಕಾರಿಗೆ ಗುದ್ದಿದೆ. ಬಸ್ ಚಾಲಕ ಅಪಘಾತ ತಡೆಯಲು ಯತ್ನಿಸಿದ್ದನಾದರೂ ಕಾರಿಗೆ ಡಿಕ್ಕಿಯಾದ ಪರಿಣಾಮ ಬಸ್ ಕೂಡ ಪಲ್ಟಿಯಾಗಿದೆ.

ಗಂಭೀರ ಗಾಯಗೊಂಡ ಕಾರು ಚಾಲಕ ಮೋಹನ್ ನಾಯ್ಕ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರ ಸಹಕಾರದಿಂದ ಗಾಯಗೊಂಡ ಬಸ್ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.