ಮನೆ ಅಪರಾಧ ಡಿವೈಡರ್’ಗೆ ಕಾರು ಡಿಕ್ಕಿ: ದಂಪತಿ ಸಾವು, ನಾಲ್ವರಿಗೆ ಗಂಭೀರ ಗಾಯ

ಡಿವೈಡರ್’ಗೆ ಕಾರು ಡಿಕ್ಕಿ: ದಂಪತಿ ಸಾವು, ನಾಲ್ವರಿಗೆ ಗಂಭೀರ ಗಾಯ

0

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ ಪ್ರೆಸ್‌ ವೇಯಲ್ಲಿ ಡಿವೈಡರ್‌’ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

Join Our Whatsapp Group

ಮೃತರನ್ನು ಲಕ್ನೋ ನಿವಾಸಿಗಳಾದ ಇಕ್ಬಾಲ್ (75) ಮತ್ತು ಅವರ ಪತ್ನಿ ರೆಹಾನಾ (70) ಎಂದು ಗುರುತಿಸಲಾಗಿದೆ.

ಅವರ ಕುಟುಂಬಸ್ಥರಾಗಿರುವ ಅಮೇಥಿ ಜಿಲ್ಲೆಯ ಹಸೀನ್ ಅಹಮದ್ (45), ಅವರ ಪತ್ನಿ ನುಸ್ರತ್ ಜಹಾನ್ (35), ಅವರ ಮಕ್ಕಳಾದ ಲೈಬಾ (9) ಮತ್ತು ಸಹಬಾನ್ (6) ಅವರಿಗೆ ಗಾಯಗಳಾಗಿವೆ.

ಸುಲ್ತಾನ್‌ ಪುರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬ ಹಿಂತಿರುಗುತ್ತಿದ್ದಾಗ ಪೂರ್ವಾಂಚಲ್ ಎಕ್ಸ್‌ ಪ್ರೆಸ್‌ ವೇಯಲ್ಲಿ‌ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಹೊಟೇಲ್‌ ನಲ್ಲಿ ಶವವಾಗಿ ಪತ್ತೆಯಾದ ನಿರ್ದೇಶಕ
ಮುಂದಿನ ಲೇಖನನಿಂತಿದ್ದ ಬಸ್’ಗೆ ಟಿಟಿ ಢಿಕ್ಕಿ: ಇಬ್ಬರ ಸಾವು, ಹಲವರಿಗೆ ಗಾಯ