ಮನೆ ಆರೋಗ್ಯ ಹೃದಯ ಸ್ತಂಭನ: ಭಾಗ 3

ಹೃದಯ ಸ್ತಂಭನ: ಭಾಗ 3

0

 ರೋಗ ನಿರ್ಣಯ

 ★ರೋಗಿಯ ಆರೋಗ್ಯ ಸ್ಥಿತಿ ಮತ್ತು ಮಾಡಿದ ಪರೀಕ್ಷೆಗಳ ಮೇಲೆ ಅವಲಂಬಿಸಿರುತ್ತದೆ.

Join Our Whatsapp Group

 ★ಕೂಡಲೇ ECG ಮಾಡುತ್ತಾರೆ. ಹಾನಿಯಾದ ಸ್ನಾಯುಗಳು, ರಕ್ತದೊಳಗೆ ಬಿಡುಗಡೆ ಮಾಡುವ ಎನ್ ಜೈಮ್ ಗಳ ತಪಾಸಣೆ ಮಾಡುತ್ತಾರೆ.

 ★ಒಂದು ವೇಳೆ ಸರ್ಜರಿಯು ಅವಶ್ಯಕವೆಂದು ಕಂಡುಬಂದಲ್ಲಿ,ತುರ್ತು ಕರೋನರಿ ಧಮನಿ ಅಂಜಿಯೋಗ್ರಫಿ ಮಾಡುತ್ತಾರೆ.

ಡಾಕ್ಟರನ ಕರ್ತವ್ಯ

 ★ಸೂಕ್ತವಾದ ಔಷಧಗಳನ್ನು ಕೊಟ್ಟು ನೋವನ್ನು ಶಮನಗೊಳಿಸುವುದು.

 ★ಮನೆಯಲ್ಲಿ ಔಷದೋಪಚಾರ ಮಾಡಿಕೊಳ್ಳಬಹುದೇ ಅಥವಾ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇದೆಯೇ ಎಂದು ನಿರ್ಧರಿಸುವುದು.

★ECG Blood Cholestrol Test ಇತ್ಯಾದಿ ಪರೀಕ್ಷೆಗಳಿಗೆ ಸಲಹೆ ಮಾಡಬಹುದು.

ಅಪಾಯದ ಮಿತಿ

 ★ಹೃದಯಾಘಾತವಾದ ಕೆಲವು ಗಂಟೆಯೊಳಗೆ ಶೇ. 80 ರಷ್ಟು ವೃದ್ಧರನ್ನು ಕಳೆದುಕೊಳ್ಳುವ ಸಂಭವವಿದೆ.

 ★40ವರ್ಷಗಳೊಳಗಿನವರಲ್ಲಿ ಹೃದಯಘಾತ ತೀವ್ರವಾಗಿದ್ದರೂ ಏನೂ ಅಪಾಯವಿಲ್ಲ.

 ★ಬಹಳ ಜನ ತಮ್ಮ ದೈನಂದಿನ ಕಾರ್ಯಗಳನ್ನು ಮಾಡಬಲ್ಲರು.

★ಕೆಲವರಿಗೆ ಶರೀರ ಶ್ರಮದಿಂದ ಆಜೈನಾ ಸಂಭವಿಸಬಹುದು

 ★ಕೆಲವರು ಏನು ಮಾಡಲಾಗದ ಸ್ಥಿತಿಯಾಗಿ ವಿಶ್ರಾಂತ ಜೀವನ ನಡೆಸುವಂತಾಗಬಹುದು.

 ★ಹೃದಯಘಾತ ಮರುಕಳಿಸದಂತೆ ಡಾಕ್ಟರರ ಸಲಹೆಯಂತೆ ಸರಿಯಾದ ಆಹಾರ ಸೇವಿಸುವುದು, ತೂಕವನ್ನು ಇಳಿಸಿಕೊಳ್ಳುವುದು, ಧೂಮಪಾನ ಮಾಡದಿರುವುದು, ನಿಯಮಿತವಾಗಿ ವ್ಯಾಯಾಮ, ಓಡುವುದು ಇಂತಹವನ್ನು ಮಾಡಿದರೆ ಉತ್ತಮ.

ಹೃದಯಪೀಡಿತರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಆಂಜೈನಾ ಇರುವವರು,ಹೃದಯಘಾತ ಸಂಭವಿಸಬಹುದೆಂಬ ಹೆದರಿಕೆ ಇರುವವರು ಈ ಕೆಳಗಿನ ಮುಂಜಾಗ್ರತೆ ವಹಿಸಬೇಕು.

★ತಮ್ಮ ಮನೆಯ ಹತ್ತಿರವಿರುವ 24 ಗಂಟೆಯಲ್ಲೂ ತುರ್ತು ಹೃದಯ ತಂಪಾಷಣೆ (Emergency Cardiac Care)ಮಾಡಬಲ್ಲಂತಹ ಆಸ್ಪತ್ರೆಯ ವಿಳಾಸ ಪಡೆದುಕೊಂಡಿರಬೇಕು. 

★ ಕುಟುಂಬದ ಸದಸ್ಯರಿಗೆ, ಸಹೋದ್ಯೋಗಿಗಳಿಗೆ ಹೃದಯಕ್ಕೆ ತೊಂದರೆ ಉಂಟಾದಲ್ಲಿ, ಆ ಆಸ್ಪತ್ರೆಗೆ ಕರೆದೂಯ್ಯವಂತೆ ಮೊದಲೇ ತಿಳಿಸಬೇಕು.

★ನಿಮ್ಮ ಜೇಬಿನಲ್ಲಿ, ಟೆಲಿಫೋನ್ ಪಕ್ಕದಲ್ಲಿ ಆಂಬುಲೆನ್ಸ್ ಸರ್ವಿಸಿನ  ಫೋನ್ ನಂಬರನ್ನು ಬರೆದಿಡಿ.

★ಎದೆನೋವು ಪ್ರಾರಂಭವಾಗಿ ಸ್ವಲ್ಪ ನಿಮಿಷಗಳ ಕಾಲ ಮುಂದುವರೆಯದಲ್ಲಿ ತಕ್ಷಣ ಆಂಬುಲೆನ್ಸಗೆ ಫೋನ್ ಮಾಡಿ.

★ಎದೆನೋವಿನ ಸಮಯದಲ್ಲಿ ವಾಹನ ಚಾಲನೆ ಮಾಡಕೂಡದು.

★ಆಂಬ್ಯುಲೆನ್ಸ್  ಬರುವುದು ತಡವೆನಿಸಿದಾಗ, ನಿಮ್ಮ ಕುಟುಂಬದವರೋ ಸಹೋದ್ಯೋಗಿಗಳೋ ವಾಹನ ಚಾಲನೆ ಮಾಡಲಿ.ಒಂದು ವೇಳೆ ಒಬ್ಬರೇ ಮನೆಯಲ್ಲಿದ್ದರೆ ಅಕ್ಕಪಕ್ಕದವರನ್ನು ಕೇಳಿ. ಕೊನೆ ಪಕ್ಷ ಟ್ಯಾಕ್ಸಿಯಲ್ಲಾದರೂ ಹೋಗಿ.

 ಹೃದಯಘಾತವಾದರು ಜಾಗ್ರತೆಯಿಂದಿರಬೇಕು

       ★ಹೃದಯಾಘಾತವಾದ ಕೂಡಲೆ ವೈದ್ಯರ ಸಹಾಯ ಪಡೆಯಬೇಕು. ತೀವ್ರ ಹೃದಯಘಾತವಾದವರಲ್ಲಿ ಶೇ.30 ರಿಂದ 40 ರಷ್ಟು ಜನಕ್ಕೆ ಮರಣ ಸಂಭವಿಸುವ ಸಾಧ್ಯತೆ ಇದೆ.

     ★ಹಾಗೆ ಮರಣಹೊಂದುವವರಲ್ಲಿ ಶೇ.75 ರಷ್ಟು ಮಂದಿ ಮೊದಲ ಎರಡು ಗಂಟೆಗಳಲ್ಲೇ ಸಾಯುತ್ತಾರೆ. ಅದರಲ್ಲಿ ಅರ್ಧದಷ್ಟು ಮಂದಿ ವೈದ್ಯರ ಸಕಾಲಿಕ ಸಹಾಯ ದೊರೆಯದವರಿರುತ್ತಾರೆ.

      ★ಆದ್ದರಿಂದ ಹೃದಯಘಾತವಾದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.  

 ಕೈಗೊಳ್ಳಬೇಕಾದ ಕ್ರಮಗಳು

  ★ ಏನೇ ಆದರೂ ಭಯಪಡಬಾರದು ಧೈರ್ಯಗುಂದಬಾರದು.

   ★ಅಕ್ಕ ಪಕ್ಕದವರು ಕೂಡ ಭಯ ಭೀತರಾಗದೆ ಶಾಂತ ಚಿತ್ತರಾಗಿರಬೇಕು.ಮೊದಲ ಐದು ಹತ್ತು ನಿಮಿಷ ಕಳೆದರೆ ಮರಣ ಹೊಂದುವ ಅವಕಾಶ ಶೇ.50ರಷ್ಟು ಕಡಿಮೆಯಾಗುತ್ತದೆ. (ಆಸ್ಪತ್ರೆಯಲ್ಲಿದ್ದರೆ ಇನ್ನಷ್ಟು ಶೀಘ್ರವಾಗಿ ವೈದ್ಯಕೀಯ ಸೌಲಭ್ಯ ದೊರೆಕುತ್ತದೆ.)

ಹಾರ್ಟ್ ಅಟ್ಯಾಕ್ ಆದಾಗ ಏನು ಮಾಡಬೇಕು?

ಯಾವ ವ್ಯಕ್ತಿಗಾದರೂ ಹೃದಯಾಘಾತವಾದರೆ,

★ ಬಹಳ ತೊಂದರೆ ಪಡುತ್ತ ಅವಿಶ್ರಾಂತರಾಗಿದ್ದಾರೆ, ಮಾನಸಿಕ ತುಮುಲದಿಂದ ಕೂಡಿದ್ದರೆ.

 ★ಹೆಚ್ಚಾಗಿ ಬೆವರುತ್ತಿದ್ದರೆ

 ★ಮುಖ ಬಿಳಚಿಕೊಂಡಿದ್ದರೆ

  ★ಉಸಿರಾಡಲು ತೊಂದರೆ ಪಡುತ್ತಿದ್ದರೆ

 ★ಇದು ನನಗೆ ಮಾಮೂಲು, ಆಗಾಗ ಸಂಭವಿಸುತ್ತಿರುತ್ತದೆಂದು ಸಬೂಬು ಹೇಳಿ ಆಸ್ಪತ್ರೆಗೆ ಬರಲೋಪ್ಪದಿದ್ದರೆ

 ನಾಗರಿಕರು ಏನು ಮಾಡಬೇಕು?

 -ಕೂಡಲೇ ಅಂಬ್ಯುಲೆನ್ಸ್ ಕರೆ ತರುವುದು.

 -ನಿಮ್ಮ ವಾಹನದಲ್ಲಿ ಅವರನ್ನು ಹೃದಯದ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಕರೆದೊಯ್ಯಿರಿ.

ಒಂದು ವೇಳೆ ಪ್ರಜ್ಞಾಶೂನ್ಯ ನಾಗಿದ್ದರೆ,ಪ್ರಥಮ ಚಿಕಿತ್ಸೆ ಗೊತ್ತಿದ್ದಲ್ಲಿ ಬಾಯಿಯ ಮೂಲಕ ಆತನ ಬಾಯಿಗೆ ಗಾಳಿ ಊದಿ, ಆತನ ಎದೆಯ ಮೇಲೆ ನಿಮ್ಮ ಕೈಯಿಂದ ಬಲವಾಗಿ ಒತ್ತುವುದು, ತಲೆದಿಂಬನ್ನು ತೆಗೆದು ಕಾಲ ಕೆಳಗೆ ಇಡುವುದು ಮಾಡಬೇಕು.

ಹಿಂದಿನ ಲೇಖನಬಳ್ಳಾರಿಯಲ್ಲಿ ಶ್ರೀರಾಮುಲುಗೆ ಆಘಾತ, ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಗೆಲುವು
ಮುಂದಿನ ಲೇಖನಲೋಕಸಭೆ ಚುನಾವಣೆ: ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಎಸ್; 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು