ಮನೆ ರಾಜ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಂಗೋಪಾಲ್‌ ನಿಧನ

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಂಗೋಪಾಲ್‌ ನಿಧನ

0

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಂಗೋಪಾಲ್‌(87) ಇಂದು ಬೆಳಗಿನ ಜಾವ ನಿಧನರಾದರು.

ತಮಿಳುನಾಡಿನ ಕುಂಭಕೋಣಂನಲ್ಲಿ 1935ರಲ್ಲಿ ಜನಿಸಿದ ವಿದುಷಿ ನೀಲಾ, ಮದುವೆಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಉತ್ತಮ ಮನೋಧರ್ಮ, ವಿದ್ವತ್‌ಪೂರ್ಣ ಗಾಯನಕ್ಕೆ ಹೆಸರಾದ ನೀಲಾ, ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದವರು.

ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ನೀಡುವ ಸಂಗೀತ ಕಲಾಚಾರ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಸಂಗೀತ ಕಲಾಶ್ರೀ’ ರಾಮಸೇವಾ ಮಂಡಳಿ ನೀಡುವ ಸಂಗೀತ ಚೂಡಾಮಣಿ.. ಇವೇ ಮುಂತಾದ ಪ್ರಶಸ್ತಿಗಳಿಗೆ ಭಾಜನರಾದ ಇವರು ಶಿಷ್ಯಂದಿರ ಪ್ರೀತಿಯ ‘ನೀಲಾ ಮಾಮಿ’ ಎಂದೇ ಹೆಸರಾಗಿದ್ದರು.

ಹಿಂದಿನ ಲೇಖನರಕ್ತಹೀನತೆ: ಕಾರಣ, ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ
ಮುಂದಿನ ಲೇಖನಮಾರ್ಚ್ 3 ರಂದು ‘ಕಾಸಿನ ಸರ’ ಚಿತ್ರ ಬಿಡುಗಡೆ