ಮನೆ ರಾಜಕೀಯ ರಿಂಗ್ ರೋಡ್ ನಲ್ಲಿರುವ ಫ್ಲೆಕ್ಸ್ ತೆಗೆಸಿ: ಪ್ರತಾಪ್ ಸಿಂಹ

ರಿಂಗ್ ರೋಡ್ ನಲ್ಲಿರುವ ಫ್ಲೆಕ್ಸ್ ತೆಗೆಸಿ: ಪ್ರತಾಪ್ ಸಿಂಹ

0

ಮೈಸೂರು:  ರಿಂಗ್ ರೋಡ್ ನಲ್ಲಿ ಕೆಲ ಮಹಾನ್ ನಾಯಕರು, ಬರ್ತ್ ಡೇ ಪಾರ್ಟಿಗಳ ಫ್ಲೆಕ್ಸ್ ಇದೆ. ಮೊದಲು ಅದನ್ನ ತೆಗೆಸಿ ಎಂದು ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಇಂದು  ಸೂಚನೆ ನೀಡಿದ್ದಾರೆ.

ಇಂದು ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಈ ಕುರಿತು ಸೂಚಿಸಿದ ಸಂಸದ ಪ್ರತಾಪ್ ಸಿಂಹ, ಕಳೆದ ಎರಡು ವರ್ಷದಿಂದ ಈ ಫ್ಲೆಕ್ಸ್ ಭರಾಟೆ ಹೆಚ್ಚಾಗಿದೆ. ಯಾರೇ ಆಗಿದ್ದರೂ ನೋಟೀಸ್ ನೀಡಿ. ನಮ್ಮ ಪಾರ್ಟಿಯವರದ್ದು ಆಗಿದ್ದರೂ ಮೊದಲು ಅವರಿಗೆ ನೋಟೀಸ್ ನೀಡಿ.

ಅಣ್ಣ ಬೇಜಾರ್ ಮಾಡ್ಕೊತಾನೆ ಅಂತ ಕೆಲವರು ಪೋಟೊ ಹಾಕಿರ್ತಾರೆ.  ದಯಮಾಡಿ ಆ ಅಣ್ಣನಿಗೆ ಮೊದಲು  ನೋಟೀಸ್ ನೀಡಿ. ಇದಕ್ಕೆ  ನಿಮ್ಮ ಸಹಕಾರ ಬೇಕು  ಎಂದು ಜಿಲ್ಲಾಧಿಕಾರಿಗಳು. ಪಾಲಿಕೆ ಆಯುಕ್ತರಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

ಹಿಂದಿನ ಲೇಖನಬಿಬಿಎಂಪಿ ಮೇಲೆ ಎಸಿಬಿ ದಾಳಿ: ಕಡತಗಳ ಪರಿಶೀಲನೆ
ಮುಂದಿನ ಲೇಖನಹಾಲಿ ನಿರ್ವಹಿಸುತ್ತಿದ್ದ ಹುದ್ದೆಯಿಂದ 7 ಕೆಎಎಸ್ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರದ ಆದೇಶ