ಮನೆ ಕಾನೂನು ಸಿಡಿ ಪ್ರಕರಣ: ಎಸ್ಐಟಿ ವರದಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ

ಸಿಡಿ ಪ್ರಕರಣ: ಎಸ್ಐಟಿ ವರದಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ

0

ಬೆಂಗಳೂರು: ಸಿಡಿ ಬಹಿರಂಗ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ  ಎದುರಾಗಿದ್ದು, ಪ್ರಕರಣ ಸಂಬಂಧ ಎಸ್ಐಟಿ ವರದಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಪಾತ್ರವಿಲ್ಲ ಎಂದು ಎಸ್ ಐಟಿ ವರದಿಯಲ್ಲಿ ತಿಳಿಸಲಾಗಿತ್ತು. ವರದಿಯನ್ನು ಸೆಷನ್ಸ್ ಕೋರ್ಟ್ ಗೆ ಸಲ್ಲಿಸುವಂತೆ ಹೈಕೋರ್ಟ್ ಎಸ್ ಐಟಿಗೆ ಸೂಚಿಸಿತ್ತು.  ನಂತರ ಎಸ್ ಐಟಿ ವರದಿ ಮೇಲೆ ನಮಗೆ ನಂಬಿಕೆ ಇಲ್ಲ. ಸರ್ಕಾರ ಸ್ವಯಂ ಪ್ರೇರಿತವಾಗಿ ಎಸ್ ಐಟಿ ರಚಿಸಿಲ್ಲ. ರಾಜಕೀಯ ಒತ್ತಡ ಹೇರಲಾಗಿದೆ ಇಂತಹ ವರದಿಯ ಆಧರಿಸಿ ವಿಚಾರಣೆ ನಡಸುವುದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿ ಎಸ್ ಐಟಿ ವರದಿ ಪ್ರಶ್ನಿಸಿ  ಯುವತಿ ಪರ ವಕೀಲರು ಸುಪ್ರಿಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಎಸ್ ಐಟಿ ವರದಿಗೆ ತಡೆಯಾಜ್ಞೆ ನೀಡಿದ್ದು,  ಎಸ್ ಐಟಿ ವರದಿ ಸರಿ ಇದೆಯಾ ಖಾತರಿಪಡಿಸಿಕೊಳ್ಳಿ ಎಂದು ಹೈಕೋರ್ಟ್ ಗೆ ಸೂಚನೆ ನೀಡಿದೆ.

ಹಿಂದಿನ ಲೇಖನಫೆ.27ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ: ಸಿದ್ದರಾಮಯ್ಯ
ಮುಂದಿನ ಲೇಖನಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಗುರಿ: 3 ಒಡಂಬಡಿಕೆಗಳಿಗೆ ಅಂಕಿತ