ಮನೆ ರಾಜಕೀಯ ಫೆ.27ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ: ಸಿದ್ದರಾಮಯ್ಯ

ಫೆ.27ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ: ಸಿದ್ದರಾಮಯ್ಯ

0

ಬೆಂಗಳೂರು: ಕೋವಿಡ್ ಕಾರಣದಿಂದಾಗಿ  ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್ ನ ಮೇಕೆದಾಟು ಹೋರಾಟ ಮತ್ತೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು,  ಫೆಬ್ರವರಿ 27 ರಂದು ರಾಮನಗರದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತಾಗಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಂಗಮದಿಂದ ಜ.9 ರಂದು ಆರಂಭಿಸಿ ಮಧ್ಯೆ ನಿಲ್ಲಿಸಿದ್ದ  ಮೇಕೆದಾಟು ಪಾದಯಾತ್ರೆ ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದರು.

ಐದು ದಿನಗಳ ಕಾಲ ನಡೆಸಿ ಕೋವಿಡ್ ನಿಯಮಾವಳಿ ಹಿನ್ನೆಲೆ ನಿಲ್ಲಿಸಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಫೆ.27 ರಿಂದ ಮರು ಆರಂಭಿಸುತ್ತಿದ್ದೇವೆ. ರಾಮನಗರದಿಂದ ಮುಂದುವರಿಸಿ ಐದು ದಿನ ಪಾದಯಾತ್ರೆ ನಡೆಸುತ್ತೇವೆ. ಕೊನೆಯ ದಿನ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸದ್ಯ ಕೊರೊನಾ ಗೈಡ್ ಲೈನ್ಸ್ ಇಲ್ಲ. ಇನ್ನು ಮಹದಾಯಿ ಹೋರಾಟ ಆಮೇಲೆ ಹೇಳ್ತೀವಿ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ನಾನು, ಡಿ.ಕೆ. ಶಿವಕುಮಾರ್ ಮತ್ತಿತರ ನಾಯಕರು ಪಾಲ್ಗೊಳ್ಳುತ್ತೇವೆ. ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಯಲ್ಲ ಎಂದರು.
ಸದನ ಇರುವವರೆಗೆ ಆಹೋರಾತ್ರಿ ಹೋರಾಟ ಮಾಡುತ್ತೇವೆ. ನಾವು ಆಹೋರಾತ್ರಿ ಹೋರಾಟ ಮುಂದುವರಿಸ್ತೇವೆ. ಪ್ರತಿಭಟನೆಯನ್ನ ನಾವು ನಿಲ್ಲಿಸಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡಿದ್ರು ಅಲ್ವಾ? ಯಾರ ವಿರುದ್ಧ ಹೋರಾಟ ಮಾಡಿದ್ದು. ಇದೇ ಮೋದಿ ವಿರುದ್ದ ಅಲ್ಲವೇ? ಪ್ರತಿಭಟನೆಯಲ್ಲಿ 719 ರೈತರು ಸಾವನ್ನಪ್ಪಿದರು. ನಂತರದಲ್ಲಿ ಕಾಯ್ದೆಯನ್ನು ಸರ್ಕಾರ ರದ್ದುಗೊಳಿದಾಗ ಕ್ಷಮೆ ಕೇಳಿದ್ರು. ತಪ್ಪು ಮಾಡಿದ್ದೇವೆ ಎಂದು ತಾನೇ ವಿತ್ ಡ್ರಾ ಮಾಡಿದ್ದು. ಇದು ಹೋರಾಟವಲ್ವಾ? ಎಂದು ಕಿಡಿಕಾರಿದರು.

ಹಿಂದಿನ ಲೇಖನಅಂಬೇಡ್ಕರ್‌ಗೆ ಅಪಮಾನ ಪ್ರಕರಣ: ರಾಯಚೂರು ನ್ಯಾಯಾಧೀಶರ ವರ್ಗಾವಣೆ
ಮುಂದಿನ ಲೇಖನಸಿಡಿ ಪ್ರಕರಣ: ಎಸ್ಐಟಿ ವರದಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ