ಮನೆ ರಾಜಕೀಯ ಕೇಂದ್ರ ಸರ್ಕಾರ ಬರೋಬ್ಬರಿ 26 ಲಕ್ಷ ಕೋಟಿ ರೂ. ಕಬಳಿಸಿದೆ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

ಕೇಂದ್ರ ಸರ್ಕಾರ ಬರೋಬ್ಬರಿ 26 ಲಕ್ಷ ಕೋಟಿ ರೂ. ಕಬಳಿಸಿದೆ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

0

ಚೆನ್ನೈ(Chennai)-ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರ ಬರೋಬ್ಬರಿ 26 ಲಕ್ಷ ಕೋಟಿ ರೂ. ಕಬಳಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಮತ್ತು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ (Palanivel Thyagarajan) ಆರೋಪಿಸಿದ್ದಾರೆ.

ತೈಲ ಬೆಲೆ ಏರಿಕೆ ಕುರಿತ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು ಕೇಂದ್ರ ಸರ್ಕಾರ ಬರೋಬ್ಬರಿ 26 ಲಕ್ಷ ಕೋಟಿ ರೂ. ಕಬಳಿಸಿದೆ ಎಂದಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಬೇಕೆಂದು ಪ್ರಧಾನಿ ಮೋದಿ ಅವರು ಮಾಡಿದ್ದ ಮನವಿಯ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಮಾತನಾಡಿದ ಸಿಎಂ ಸ್ಟಾಲಿನ್, ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿನ ಚರ್ಚೆಯ ಕುರಿತು ಟ್ವೀಟ್ ಮಾಡಿದ ಸ್ಟಾಲಿನ್, ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆ ಮುಗಿದ ತಕ್ಷಣ ಇಂಧನ ಬೆಲೆ ಹೆಚ್ಚಿಸುವ ಅಭ್ಯಾಸವನ್ನು ಹೊಂದಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಇಂಧನ ಬೆಲೆ ಇಳಿಕೆ ಮಾಡಿ, ಫಲಿತಾಂಶ ಪ್ರಕಟವಾದ ಬಳಿಕ ಮತ್ತೆ ಬೆಲೆ ಏರಿಕೆ ಮಾಡಿದೆ. ಇದು ಕೇಂದ್ರ ಸರ್ಕಾರದ ದೊಡ್ಡ ನಾಟಕ. ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ ಕೇಂದ್ರ ಸರ್ಕಾರ 26 ಲಕ್ಷ ಕೋಟಿ ರೂ.ಗಳನ್ನು ಕಬಳಿಸಿದೆ. ಈಗ ಇಂಧನ ಬೆಲೆ ಏರಿಕೆಯಾದಾಗ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ದೂಷಿಸುವುದು ಒಂದು ಹಿಡಿ ಅಕ್ಕಿಯಿಂದ ಕುಂಬಳಕಾಯಿಯನ್ನು ಮುಚ್ಚುವ ಪ್ರಯತ್ನಕ್ಕೆ ಸಮಾನ ಎಂದು ಸಿಎಂ ಸ್ಟಾಲಿನ್ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ವೇಳೆ ಪ್ರಧಾನಿ ಮೋದಿ ಅವರು, ಪ್ರತಿಪಕ್ಷಗಳ ಆಡಳಿತವಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ಮೋದಿ ನಿನ್ನೆ ಮನವಿ ಮಾಡಿದ್ದರು.

ಹಿಂದಿನ ಲೇಖನಅಧಿಕ ಅಂಕಗಳಿಸಿದ ಮೀಸಲಾತಿ ಅಭ್ಯರ್ಥಿಯನ್ನು ‘ಸಾಮಾನ್ಯ ವರ್ಗ’ದಡಿ ಪರಿಗಣಿಸಬೇಕು: ಸುಪ್ರೀಂಕೋರ್ಟ್‌
ಮುಂದಿನ ಲೇಖನಹಿಂದಿ ರಾಷ್ಟ್ರದ ಒಂದು ಭಾಷೆಯೇ ಹೊರತು, ರಾಷ್ಟ್ರಭಾಷೆ ಅಲ್ಲ: ಡಾ. ಬರಗೂರು ರಾಮಚಂದ್ರಪ್ಪ