ಮನೆ ಕ್ರೀಡೆ ಹಾಕಿ: ಮೇಲುಗೈ ಸಾಧಿಸಿದ ಮೈಸೂರು ತಂಡ

ಹಾಕಿ: ಮೇಲುಗೈ ಸಾಧಿಸಿದ ಮೈಸೂರು ತಂಡ

0

ಮಡಿಕೇರಿ: ಭಾರತ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದ ತಂಡಗಳು ಬುಧವಾರವೂ ಮೇಲುಗೈ ಸಾಧಿಸಿದವು.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು ಕಲಬುರಗಿ ತಂಡವನ್ನು 9–0 ಗೋಲುಗಳಿಂದ ಪರಾಭವಗೊಳಿಸಿತು.

ಎಸ್‌’ಎಸ್‌’ಕೆ ಕೂಡಿಗೆ ತಂಡವು ಬೆಂಗಳೂರು ತಂಡವನ್ನು 8–0ಯಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ತಂಡ ಕಲಬುರಗಿಯನ್ನು 4–0 ಅಂತರದಲ್ಲಿ ಸೋಲಿಸಿತು.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡವು ಕಲಬುರಗಿಯನ್ನು 1–0, ಮೈಸೂರು ತಂಡವು ಬೆಂಗಳೂರು ತಂಡವನ್ನು 5–0, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಬೆಂಗಳೂರವನ್ನು 5–0 ಗೋಲುಗಳಿಂದ ಮಣಿಸಿತು.

17 ವರ್ಷದೊದೊಳಗಿನ ಬಾಲಕರ ವಿಭಾಗದಲ್ಲಿ ಎಸ್‌’ಎಸ್‌’ಕೆ ಕೂಡಿಗೆ ತಂಡವು ಬೆಂಗಳೂರನ್ನು 3–1, ಮೈಸೂರು ತಂಡ ಬೆಳಗಾವಿ ತಂಡವನ್ನು 5–2ರಿಂದ ಸೋಲಿಸಿದವು.

ಹಿಂದಿನ ಲೇಖನಸರ್ಕಾರದ ನಿರ್ಲಕ್ಷ್ಯದಿಂದ ಮಂಗಳೂರಿನಲ್ಲಿ ಬಾಂಬ್ ಸ್ಫೋಟ: ಪ್ರಮೋದ್‌ ಮುತಾಲಿಕ್‌
ಮುಂದಿನ ಲೇಖನನಾಟಕ, ನೃತ್ಯ, ಸಂಗೀತದಿಂದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ: ಡಾ.ಲತಾ ರಾಜಶೇಖರ್