ಮನೆ ಯೋಗಾಸನ ಚಕ್ರಾಸನ

ಚಕ್ರಾಸನ

0

   ‘ ಚಕ್ರ’ವೆಂದರೆ ಸುತ್ತುವ ಗಾಲಿ.ಈ ಭಂಗಿಯಲ್ಲಿ ನೆಲದ ಮೇಲೆ ಬೆನ್ನನೂರಿ ಮಲಗಿ, ಎರಡೂ ಕಾಲುಗಳನ್ನೂ ಜೋಡಿಯಾಗಿ ಮೇಲೆತ್ತಿ, ಅವುಗಳನ್ನು ತಲೆಯ ಮೇಲೆ ಹಾಯಸಿ, ನೆಲಕ್ಕಿಳಿಸಿ, ‘ಹಲಾಸನ ’ಭಂಗಿಗೆ ತಂದು, ಕೈಗಳನ್ನು ಕಿವಿಗಳ ಬಳಿಯಿರಿಸಿ, ತಲೆಯಮೇಲೆ ಹೊರಳಬೇಕು. ಈ ಹುರಳಿಕೆಯ ಕ್ರಮ ಗಾಲಿಯ ತಿರುಗುವಿಕೆಯನ್ನು ಹೋಲುವುದರಿಂದ ಈ ಆಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ನೆಲದ ಮೇಲೆ ಬೆನ್ನೂರಗಿ ಅಂಗತಲೆಯಾಗಿ ಮಲಗಬೇಕು.

2. ಬಳಿಕ,ಉಸಿರನ್ನು ಹೊರಕ್ಕೆ ಬಿಟ್ಟು, ಕಾಲುಗಳನ್ನು ಜೊತೆಯಾಗಿ ಮೇಲೆತ್ತಿ, ಅವನ್ನು ತಲೆಯ ಮೇಲ್ಬಾಗದಲ್ಲಿ ಹಾಯಿಸಿ, ‘ಹಾಲಾಸನ’ದಲ್ಲಿರುವಂತೆ ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು ಆಗ ಎರಡು ಮೂರು ಸಲ ಸಾಮಾನ್ಯ ಉಸಿರಾಟ ನಡೆಸುತ್ತಿರಬೇಕು.

3. ಆಮೇಲೆ,ಕೈಗಳನ್ನು ತಲೆಯ ಮೇಲ್ಗಡೆಗೆ ಬರುವಂತೆ ಸರಿಸಿ,ಮೊಣಕೈಗಳನ್ನು ಬಾಗಿಸಿ, ಅಂಗೈಗಳನ್ನು ಹೆಗಲುಗಳ ಬಳಿ ನೆಲದ ಮೇಲೂರಿ ಕೈಬೆರಳುಗಳನ್ನು ಕಾಲುಗಳನ್ನು ದಿಕ್ಕಿಗೆ ವೃತ್ತಿರಿಕ್ತವಾಗಿ ತುದಿ ಮಾಡಬೇಕು.

 4. ಅನಂತರ ಉಸಿರನ್ನು ಹೊರ ಬಿಟ್ಟು ಅಂಗೈಗಳನ್ನು ನೆಲದ ಮೇಲೂರಿ, ಕಾಲುಗಳನ್ನು ಮತ್ತಷ್ಟು ಹಿಗ್ಗಿಸುವುದರ ಮೂಲಕ ಕತ್ತಿನ ಹಿಂಬದಿಯನ್ನು ಮೇಲೆತ್ತಿ ಮತ್ತು ತಲೆಯನ್ನು ಹೊರಳಿಸಿ ಕಾಲ್ದೆಸೆಗೆ ದೃಷ್ಟಿ ಬೀಳುವಂತೆ ಮಾಡಬೇಕು.

5. ಆ ಬಳಿಕ ತೋಳುಗಳನ್ನು ನೆರವಾಗಿ ಹಿಗ್ಗಿಸಿಟ್ಟು ‘ಅಧೋಮುಖಶ್ವಾನಾಸನ’ದ ಭಂಗಿಗೆ ತಂದಿಳಿಸಬೇಕು.

6. ಕಡೆಯಲ್ಲಿ ಮೊಣ ಕೈಗಳನ್ನು ಬಾಗಿಸಿ ಮುಂಡವನ್ನು ನೆಲಕ್ಕಿ ಳಿಸಿ ಬೆನ್ನಿನ ಮೇಲೆ ಹೋರಾಳಾಡಿ ವಿಶ್ರಮಿಸಿಕೊಳ್ಳಬೇಕು.

ಪರಿಣಾಮಗಳು

             ಈ ಆಸನವು ಕಿಬ್ಬೊಟ್ಟೆಯೊಳಗಿನ ಅಂಗಗಳನ್ನು ಮತ್ತು ಬೆನ್ನುಮೂಳೆಯನ್ನೂ ಹುರುಪುಗೊಳಿಸುತ್ತದೆ  ಗಾಲಿಯ ಸುತ್ತಚಲನೆಯಿಂದ ರಕ್ತವು ಬೆನ್ನು ಮೂಳೆ, ಇಲ್ಲದೆ ಬ್ರಹ್ಮದಂಡಿಯ ಸುತ್ತಲೂ ರಕ್ತ ಪರಿಚಲನೆಯಾಗಿ,ಅದಕ್ಕೆ ತಾರುಣ್ಯ ವೀಯುತ್ತದೆ.ಇಲ್ಲವೇ ಪಿತ್ತಕೋಶ ಮಾಂದ್ಯದಿಂದ, ಅಂದರೆ ಕುಂದಿದ ಜೀರ್ಣಶಕ್ತಿಯಿಂದ ನರಳುವವರಿಗೆ ಇದು ಉತ್ತಮ ಫಲವನ್ನು ಕೊಡುತ್ತದೆ.