ಮನೆ ಅಪರಾಧ ಐವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ತಂಗಿಯ ಗಂಡನೊಂದಿಗಿನ ಅಕ್ರಮ ಸಂಬಂಧಕ್ಕೆ ಕುಟುಂಬವೇ ಬಲಿ

ಐವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ತಂಗಿಯ ಗಂಡನೊಂದಿಗಿನ ಅಕ್ರಮ ಸಂಬಂಧಕ್ಕೆ ಕುಟುಂಬವೇ ಬಲಿ

0

ಮಂಡ್ಯ: ಕೆಆರ್​ಎಸ್​​ನ ನಗರದ ಜನರನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ರೋಚಕ ತಿರುವು ದೊರೆತಿದ್ದು, ಕೊಲೆಯಾದ ಮಹಿಳೆಯ ಗಂಡನ ಮೇಲಿನ ಪ್ರೀತಿ ಕೊಲೆಗೆ ಕಾರಣವೆಂದು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹಿಳೆಯನ್ನು ಲಕ್ಷ್ಮೀ(30) ಎಂದು ಗುರುತಿಸಲಾಗಿದೆ.

ಕೊಲೆಯಾದ ಮಹಿಳೆಯ ಗಂಡನ ಮೇಲೆ ಈಕೆಗೆ ಇತ್ತು ಕ್ರಶ್. ಆತನ‌ ಮೇಲಿನ ಪ್ರೀತಿಗೆ ಐವರನ್ನು ಕೊಲೆ‌‌ ಮಾಡಿದ್ದಳು ಈಕೆ, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಕೊಲೆಯಾದ ಲಕ್ಷ್ಮಿ(26) ಗಂಡ ಗಂಗಾರಾಮ್ ಜೊತೆ ಈಕೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆಕೆಯನ್ನು ಬಿಟ್ಟು ತನ್ನನ್ನ ಮದುವೆಯಾಗು ಅಂತ ಗಂಗಾರಾಮ್​​ನನ್ನು ಪೀಡಿಸುತ್ತಿದ್ದಳು ಎಂದೂ ಸಹ ತಿಳಿದು ಬಂದಿದೆ.  ಅದೇ ಮಹಿಳೆಯಿಂದ ಈ ಕೃತ್ಯ ನಡೆದಿದೆ.
ಘಟನೆ ವಿವರ:  ಇದೇ ಫೆಬ್ರವರಿ 6ರಂದು ಮಂಡ್ಯದ ಕೆಆರ್​​ಎಸ್​​​ನಲ್ಲಿ  ಒಂದೇ ಕುಟುಂಬದ ಐವರು ಶವವಾಗಿ ಮಲಗಿದ್ದರು. ಮಹಿಳೆ ಹಾಗೂ ನಾಲ್ಕು  ಮಕ್ಕಳು ಸೇರಿ ಐವರ ಕೊಲೆಯಾಗಿತ್ತು. ತಾಯಿ ಲಕ್ಷ್ಮೀ (26) ಹಾಗೂ ಮಕ್ಕಳಾದ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾಗಿದ್ದರು.
ಕೊಲೆಯಾದ ಮಹಿಳೆಯ ಗಂಡನ ಅಕ್ರಮ ಸಂಬಂಧ 5 ಜನರನ್ನು ಬಲಿ ಪಡೆದಿರುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಫೆಬ್ರವರಿ 5 ರ ರಾತ್ರಿ ಮೃತ ಲಕ್ಷ್ಮೀ ಮನೆಗೆ ಈ ಹಂತಕಿ ಬಂದಿದ್ದಳು. ಜೊತೆಯಲ್ಲಿ ಊಟ ಮಾಡಿ ಎಲ್ರೂ ನಿದ್ರೆಗೆ ಜಾರಿಗೆ ಬಳಿಕ , ತಾನು ತಂದಿದ್ದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಲಕ್ಷ್ಮೀ ಮೇಲೆ ಹಲ್ಲೆ ಆಗ್ತಿದ್ದಂತೆ ಮಕ್ಕಳು ಎಚ್ಚರಗೊಂಡಿದ್ದಾರೆ. ಬಳಿಕ ಮಕ್ಕಳ ಮೇಲೂ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾಳೆ. ಸುತ್ತಿಗೆಯಿಂದ ಹಲ್ಲೆ ಮಾಡಿದ ಬಳಿಕವೂ ಲಕ್ಷ್ಮೀ ಕುತ್ತಿಗೆ ಹಿಸುಕಿ ಸಾಯಿಸಿದ್ದಾಳೆ.  ಐವರನ್ನ ಕೊಲೆಗೈದು 2-3 ಗಂಟೆ ಅದೇ ಮನೆಯಲ್ಲಿ ಕಾಲ ಕಳೆದಿದ್ದಾಳೆ
ಬೆಳಗಿನ ಜಾವ 4 ಗಂಟೆ ಸಮಯದಲ್ಲಿ KRS ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾಳೆ. ಬೆಳಿಗ್ಗೆ 10 ಗಂಟೆ ವೇಳೆಗೆ ತನಗೆ ಏನು ಗೊತ್ತಿಲ್ಲ ಎಂಬಂತೆ ಮತ್ತೆ ಕೆಆರ್​​ಎಸ್​​ಗೆ ಬಂದಿದ್ದಾಳೆ. ಮೃತರ ಮನೆ‌ ಮುಂದೆ ಕುಳಿತು ಗೋಳಾಡಿದ್ದಾಳೆ. ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದಾಳೆ. ಕ್ಯಾಮೆರಾ ದೂರ ತೆಗೆದುಕೊಂಡು ಹೋಗಿ ಎಂದು ಅವಾಜ್ ಹಾಕಿದ್ದಾಳೆ.
ಕೊಲೆಗೆ ಕಾರಣವೇನು?: ಮೃತ ಲಕ್ಷ್ಮೀ ಗಂಡ ಗಂಗಾರಾಮ್ ಜೊತೆ ಆರೋಪಿ ಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದಳು. ಮದುವೆಯಾಗುವಂತೆ ಗಂಗಾರಾಮ್​​ನ್ನು ಪೀಡಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಅಕ್ರಮ ಸಂಬಂಧ ವಿಚಾರ ತಿಳಿದು ಗಂಗಾರಾಮ್ ಜೊತೆ ಪತ್ನಿ ಲಕ್ಷ್ಮೀ ಜಗಳವಾಡಿದ್ದಾಳೆ. ಜಗಳದ ಬಳಿಕ ಗಂಗಾರಾಮ್​ ಆರೋಪಿ ಲಕ್ಷ್ಮೀ‌ಯಿಂದ ಅಂತರ ಕಾಯ್ದುಕೊಂಡಿದ್ದ.  ಪತ್ನಿ ಸಾಯಿಸಿದ್ರೆ ಗಂಗಾರಾಮ್ ಜೊತೆ ಇರಬಹುದು ಎಂಬ ಕಾರಣಕ್ಕೆ ಹಂತಕಿ ಕೊಲೆ ಮಾಡಿದ್ದಾಳೆ. ಗಂಗಾರಾಮ್ ವ್ಯಾಪಾರಕ್ಕಾಗಿ ಹೊರ ರಾಜ್ಯಕ್ಕೆ ತೆರಳಿದ್ದ ವೇಳೆ ಈ ಕೃತ್ಯ ಎಸಗಿದ್ದಾಳೆ.

ಹಿಂದಿನ ಲೇಖನಮುಖ್ಯಮಂತ್ರಿ ಸ್ಥಾನಕ್ಕೆ ಚನ್ನಿ ಯೋಗ್ಯರಲ್ಲ: ಅಮರಿಂದರ್ ಸಿಂಗ್
ಮುಂದಿನ ಲೇಖನಹಿಜಾಬ್ ವಿವಾದ: ಮುಸ್ಲಿಂ ಮಹಿಳೆಯರ ಪರ ಪ್ರಿಯಾಂಕಾ ಗಾಂಧಿ ಟ್ವೀಟ್