ಮನೆ ರಾಜಕೀಯ ಸಿದ್ದರಾಮಯ್ಯ ಟೀಕಿಸಿದ ಛಲವಾದಿ ನಾರಾಯಣ ಸ್ವಾಮಿ: ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ

ಸಿದ್ದರಾಮಯ್ಯ ಟೀಕಿಸಿದ ಛಲವಾದಿ ನಾರಾಯಣ ಸ್ವಾಮಿ: ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ

0

ಮೈಸೂರು(Mysuru): ಸಿದ್ಧರಾಮಯ್ಯ ತಿಕ್ಕಲು ನಾಯಕರು ಎಂದು ಟೀಕಿಸಿದ್ಧ ಬಿಜೆಪಿ ಎಂಎಲ್ ಸಿ ಚಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ನಗರ ಘಟಕದ  ಜಿಲ್ಲಾಧ್ಯಕ್ಷ ವಿಜಯ್ ಕುಮಾರ್  ಹಾಗೂ ಭೋವಿ ನಿಗಮದ  ಮಾಜಿ ಅಧ್ಯಕ್ಷ ಸೀತಾರಾಮ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್’ನ ನಗರ ಘಟಕದ  ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ನೇತೃತ್ವದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಕುಮಾರ್, ಎಲುಬಿಲ್ಲದ ನಾಲಿಗೆಯಿಂದ ಬಾಯಿಗೆ ಬಂದಹಾಗೆ ಮಾತನಾಡಬಾರದು. ನಾರಾಯಣ ಸ್ವಾಮಿ ಈ ಕೂಡಲೇ ಕ್ಷಮೆ ಕೇಳಬೇಕು ಎಂದು  ಆಗ್ರಹಿಸಿದರು.

ಚಲವಾದಿ ನಾರಾಯಣ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ನವರ ಬಗ್ಗೆ ಮಾತಾನಾಡಿರುವ ಬಗ್ಗೆ ಮಟ್ಟಿಗೆ ಸರಿ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಸುಗ್ರಿವಾಜ್ಞೆ ಮೂಲಕ ಬಡ್ತಿ ಮೀಸಲಾತಿ ಜಾರಿಗೆ ತಂದವರು ಸಿದ್ದರಾಮಯ್ಯ. ದಲಿತರಿಗೆ ಸಿದ್ದರಾಮಯ್ಯನವರ ಕೊಡುಗೆ ಅಪಾರ. ಅವರ ಕಾಲಾವಧಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಎಷ್ಟು ಕಾರ್ಯಕ್ರಮಗಳನ್ನ ಕೊಟ್ಟಿದ್ದಾರೆ. ಅನ್ನೋದು ಜನರಿಗೆ ಗೊತ್ತು. ಇದು ಚಲವಾದಿ ನಾರಾಯಣ ಸ್ವಾಮಿ ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ಇದಕ್ಕೆ ನೀವು ಉತ್ತರ ಕೊಡಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೋವಿ ನಿಗಮದ  ಮಾಜಿ ಅಧ್ಯಕ್ಷ ಸೀತಾರಾಮ್, ಛಲವಾದಿ ನಾರಾಯಣಸ್ವಾಮಿ ಬಿಜೆಪಿಯ ನಾಯಿಮರಿ. ಮೈಸೂರಿನಲ್ಲೊಂದು, ಬೆಂಗಳೂರಿನಲ್ಲೊಂದು ನಾಯಿಮರಿ ಇದೆ ಎಂದು ವ್ಯಂಗ್ಯವಾಡಿದರು.

ಪಾರ್ಟಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಬಿಜೆಪಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ  ಅಂಬೇಡ್ಕರ್ ನಿಗಮಕ್ಕೆ ಅಧ್ಯಕ್ಷ ಆಗಬೇಕು ಎಂದುಕೊಂಡಿದ್ದ. ಆದರೆ ಅದು ಸಾಧ್ಯವಾಗದ ಹಿನ್ನೆಲೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸೋಲಿಸಲು ವರುಣಗೆ ಬಂದಿದ್ದರು. ಸಿದ್ದರಾಮಯ್ಯರನ್ನ ಮಾತ್ರ ಟೀಕೆ ಮಾಡೋದೇ ಈತನ ಕೆಲಸವಾಗಿದೆ. ಕಾಂಗ್ರೆಸ್ ನ ಉಳಿದ ಯಾವುದೇ ನಾಯಕರ ವಿರುದ್ಧ ಟೀಕೆ ಮಾಡುತ್ತಿಲ್ಲ ಎಂದು ಗುಡುಗಿದರು.

ಈತ ಒಬ್ಬ ಆರ್’ಎಸ್’ಎಸ್ ಜೊತೆಗಿರುವ ನಾಯಿಮರಿ. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿ ನಾರಾಯಣಸ್ವಾಮಿಯನ್ನ ಬಿಟ್ಟಿದ್ದಾರೆ. ಆತ ಬಿಜೆಪಿಯಲ್ಲಿ ಗರ್ಭಗುಡಿ ತೋರಿಸುತ್ತಾರೆ ಎಂದು ಕೊಂಡಿರಬಹುದು. ವರುಣದ ಚಿಕ್ಕಹಳ್ಳಿ  ಪಕ್ಷದಲ್ಲಿದ್ದರೂ ಸಿದ್ದರಾಮಯ್ಯರನ್ನು ಸೋಲಿಸಲು ಹಣ ಹಂಚಲು ಬಂದಿದ್ದರು. ಅಂದು ನನಗೆ ಸಿಕ್ಕಿಬಿದ್ದಿದ್ದರು. ಸಿದ್ದರಾಮಯ್ಯ ಸೋತರೆ ಪರಮೇಶ್ವರ್ ಸಿಎಂ ಆಗ್ತಾರೆ ಎಂದು ಸುಳ್ಳು ಹೇಳಿ ಸಿದ್ದರಾಮಯ್ಯ ಸೋಲಿಸಲು ಬಂದ ವ್ಯಕ್ತಿ ಈತ. ಸದ್ಯ ಬಿಜೆಪಿಯಲ್ಲಿ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸೀತಾರಾಮ್ ಹರಿಹಾಯ್ದರು.

ಹಿಂದಿನ ಲೇಖನಹಿಂದಿ ಹೇರಿಕೆ ವಿವಾದ: ಪ್ರಧಾನಿ ಮೋದಿ ಮಧ್ಯ ಪ್ರವೇಶಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಮುಂದಿನ ಲೇಖನಶ್ರೀನಗರ: ಕಾಶ್ಮೀರಿ ಪಂಡಿತನ ಹತ್ಯೆಗೈದ ಉಗ್ರರು