ಮನೆ ಸುದ್ದಿ ಜಾಲ ಪ್ರೊ.ಎಂ.ವೆಂಕಟೇಶ್ ಕುಮಾರ್ ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

ಪ್ರೊ.ಎಂ.ವೆಂಕಟೇಶ್ ಕುಮಾರ್ ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

0

ಧಾರವಾಡ: ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರೊ.ಎಂ.ವೆಂಕಟೇಶ ಕುಮಾರ್ ಅವರಿಗೆ ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ಕಾಳಿದಾಸ ಸಮ್ಮಾನ ಪ್ರಶಸ್ತಿ ಘೋಷಣೆಯಾಗಿದೆ.

2017 ನೇ ಸಾಲಿನ ಪುರಸ್ಕಾರ ಇದಾಗಿದ್ದು,  ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ, ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಮಧ್ಯ ಪ್ರದೇಶ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಂಚಾಲಕ ಆದಿತಿಕುಮಾರ್ ತ್ರಿಪಾಠಿ ತಿಳಿಸಿದ್ದಾರೆ. ಪ್ರಶಸ್ತಿಯು 2 ಲಕ್ಷ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಹಿಂದಿನ ಲೇಖನಪೀಠಕ್ಕೆ ನೀಡಿರುವ ಕಾಣಿಕೆ ವಾಪಸ್ ಕೇಳುವ ಸಣ್ಣವ ನಾನಲ್ಲ: ಮುರುಗೇಶ್ ನಿರಾಣಿ
ಮುಂದಿನ ಲೇಖನಇಂಗ್ಲೆಂಡ್ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್ ವುಡ್ ವಜಾ