ಮನೆ ರಾಜಕೀಯ ಅರವಿಂದ ಬೆಲ್ಲದ ಮನೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಅರವಿಂದ ಬೆಲ್ಲದ ಮನೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ (Hubli)- ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಅರವಿಂದ ಬೆಲ್ಲದ (Arvind Bellad) ಅವರ ಮನೆಗೆ ಭಾನುವಾರ ಮುಖ್ಯಮಂತ್ರಿ (CM) ಬಸವರಾಜ ಬೊಮ್ಮಯಿ (Basavaraj Bommai) ಅವರು ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಲ್ಲದ ಅವರ ಮನೆಗೆ ಭೇಟಿ ನೀಡಿ ಅರ್ಧಗಂಟೆಗೂ ಹೆಚ್ಚು ಸಮಯ ಕಳೆದು ಅಲ್ಲಿಯೇ ಉಪಾಹಾರ ಸೇವಿಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ರಾಜಕೀಯವನ್ನು ಚರ್ಚೆ ಮಾಡಲು ಬೆಲ್ಲದ ಮನೆಗೆ ಬಂದಿಲ್ಲ. ಮನೆಯಲ್ಲಿ ಚರ್ಚೆಯೂ ಮಾಡುವುದಿಲ್ಲ. ವ್ಯಾಪಾರದ ಬಗ್ಗೆ ಚರ್ಚಿಸಿದ್ದೇವೆ. ಇದೊಂದು ಔಪಚಾರಿಕ ಭೇಟಿಯಷ್ಟೇ ಎಂದರು.

ಶಾಸಕ ಅರವಿಂದ ಬೆಲ್ಲದ ಅವರು, ಮುಖ್ಯಮಂತ್ರಿ ಹುಬ್ಬಳ್ಳಿಗೆ ಬರುವ ವಿಚಾರ ಗೊತ್ತಿದ್ದರಿಂದ ಕುಟುಂಬ ಸಮೇತರಾಗಿ ಉಪಾಹಾರಕ್ಕೆ ಮನೆಗೆ ಬರುವಂತೆ ಶನಿವಾರ ರಾತ್ರಿಯೇ ಅವರನ್ನು ಆಹ್ವಾನಿಸಿದ್ದೆ. ರಾಜಕೀಯದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ವ್ಯಾಪಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ನನ್ನನ್ನು ಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಹಿಂದಿನ ಲೇಖನಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡಬೇಡಿ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ವೈ
ಮುಂದಿನ ಲೇಖನಐಪಿಎಲ್‌ ಟೂರ್ನಿ: ಫೈನಲ್‌- ಪ್ಲೇ-ಆಫ್ಸ್ರ್ ಪಂದ್ಯಗಳ ವೇಳಾಪಟ್ಟಿ ಪ್ರಕಟ