ಮನೆ ರಾಷ್ಟ್ರೀಯ ವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ

ವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ

0

ನವದೆಹಲಿ: ಲೋಕಸಭಾ ಚುನಾವಣೆ ಬೆನ್ನಲ್ಲೇ ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಸತತ ಎರಡನೇ ಬಾರಿಗೆ ಇಳಿಸಿವೆ.

Join Our Whatsapp Group

ಸರ್ಕಾರಿ ತೈಲ ಕಂಪನಿಗಳು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಇಂದಿನಿಂದ ದೇಶದ ವಿವಿಧ ನಗರಗಳಲ್ಲಿ ಎಲ್‌ ಪಿಜಿ ಸಿಲಿಂಡರ್‌ ಗಳ ಬೆಲೆ 19 ರೂ.ವರೆಗೆ ಇಳಿಕೆಯಾಗಿದೆ.  

ಈ ಕಡಿತದ ಪ್ರಯೋಜನವು 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಮೇಲೆ ಮಾತ್ರ ಲಭ್ಯವಿರುತ್ತದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ಬಾರಿಯೂ ಯಾವುದೇ ಬದಲಾವಣೆಯಾಗಿಲ್ಲ.

ಇತ್ತೀಚಿನ ಬೆಲೆ ಇಳಿಕೆಯ ನಂತರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,745.50 ರೂ.ಗೆ ಇಳಿದಿದೆ. ಅದೇ ರೀತಿ ಇಂದಿನಿಂದ ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಗಳು 1,859 ರೂ.ಗೆ ಲಭ್ಯವಾಗಲಿದೆ. ಮುಂಬೈನ ಜನರು ಈಗ ಈ ವಾಣಿಜ್ಯ ಸಿಲಿಂಡರ್‌ಗೆ ರೂ 1,698.50 ಪಾವತಿಸಬೇಕಾಗುತ್ತದೆ, ಆದರೆ, ಚೆನ್ನೈನಲ್ಲಿ ಅದರ ಬೆಲೆ ಈಗ ರೂ 1,911 ಆಗಿರುತ್ತದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,844.50 ರೂಪಾಯಿಗಳಿಂದ 1,825.50 ರೂಪಾಯಿಗೆ ತಗ್ಗಿದೆ. ಆದ್ರೆ ದೇಶೀಯ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗದೆ 805.50 ರೂಪಾಯಿಗಳಲ್ಲೇ ಉಳಿದಿದೆ.