ಮನೆ ಅಪರಾಧ ಕೇರಳ ಪೊಲೀಸರು- ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ

ಕೇರಳ ಪೊಲೀಸರು- ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ

0
ಸಾಂದರ್ಭಿಕ ಚಿತ್ರ

ವಯನಾಡ್‌: ವಯನಾಡ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Join Our Whatsapp Group

ತಾಳಪ್ಪುಳದ ಕಂಬಮಲ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಕಾಳಗ ನಡೆದಿದೆ. ಕೂಂಬಿಂಗ್‌ ನಡೆಸುತ್ತಿದ್ದ ಪೊಲೀಸರ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು 9 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ.

ಮಾವೋವಾದಿಗಳು ಇರುವ ಗುಪ್ತಚರ ಮಾಹಿತಿ ಅನುಸರಿಸಿ ಕೂಂಬಿಂಗ್ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಾಲ್ಕು ಮಂದಿಯ ಶಂಕಿತ ಮಾವೋವಾದಿಗಳ ಗುಂಪು ಕಂಬಮಲಕ್ಕೆ ಆಗಮಿಸಿ ಏ.26ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಬಾರದು ಎಂದು ಜನರಲ್ಲಿ ವಿನಂತಿ ಮಾಡಿತ್ತು.

ಹಿಂದಿನ ಲೇಖನದೆಹಲಿ ಕಾಂಗ್ರೆಸ್‌ ನ ಇಬ್ಬರು ಮಾಜಿ ಶಾಸಕರ ರಾಜೀನಾಮೆ
ಮುಂದಿನ ಲೇಖನವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ