ಮನೆ ದೇಶ ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ದರ ರೂ.36 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ದರ ರೂ.36 ಇಳಿಕೆ

0

ನವದೆಹಲಿ (New Delhi): ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಸೋಮವಾರ 36 ರೂ. ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆಯಾಗಿರುವುದರಿಂದ 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ ದರ  2012.50 ರೂ.ಕ್ಕೆ ಬದಲಾಗಿ 1,976 ರೂ. ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.

ಜುಲೈ 1ರಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 198 ರೂ. ಕಡಿತ ಮಾಡಿದ್ದವು. ಅದಕ್ಕೂ ಮೊದಲು ಜೂನ್ 1ರಂದು 135 ರೂ. ದರ ಇಳಿಕೆ ಮಾಡಲಾಗಿತ್ತು.

ಹಿಂದಿನ ಲೇಖನಕಾಮನ್‌ ವೆಲ್ತ್‌ ಗೇಮ್ಸ್:‌ ಚಿನ್ನ ಜಯಿಸಿದ ಭಾರತದ ಅಚಿಂತ್ಯ ಶಿವಲಿ
ಮುಂದಿನ ಲೇಖನಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ವಿವಿಧ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ