ಮನೆ ಕ್ರೀಡೆ ಕಾಮನ್‌ ವೆಲ್ತ್‌ ಗೇಮ್ಸ್:‌ ಚಿನ್ನ ಜಯಿಸಿದ ಭಾರತದ ಅಚಿಂತ್ಯ ಶಿವಲಿ

ಕಾಮನ್‌ ವೆಲ್ತ್‌ ಗೇಮ್ಸ್:‌ ಚಿನ್ನ ಜಯಿಸಿದ ಭಾರತದ ಅಚಿಂತ್ಯ ಶಿವಲಿ

0

ಬರ್ಮಿಂಗ್‌ಹ್ಯಾಮ್‌ (Birmingham): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟರ್ ಅಚಿಂತ್ಯ ಶಿವಲಿ ಅವರು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಆ ಮೂಲಕ ಕಾಮನ್‌ ವೆಲ್ತ್‌ ನಲ್ಲಿ ಭಾರತ ಮೂರು ಚಿನ್ನದ ಪದಕವನ್ನು ಗಳಿಸಿದೆ.

ಪುರುಷರ 73ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಶಿವಲಿ ಒಟ್ಟು 313 ಕೆಜಿ (143 ಕೆಜಿ+170 ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡಿದರು.

ಶಿವಲಿ ಅವರಿಗೆ ಕಠಿಣ ಪೈಪೋಟಿ ನೀಡಿದ ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಅವರು ಎರಡನೇ ಅತ್ಯುತ್ತಮ ಲಿಫ್ಟರ್ ಆಗಿ ಹೊರಹೊಮ್ಮಿದರು. ಅವರು ಒಟ್ಟು 303 ಕೆ.ಜಿ (138 ಕೆಜಿ + 165 ಕೆಜಿ) ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.ಕೆನಡಾದ ಶಾದ್ ಡಾರ್ಸಿಗ್ನಿ ಒಟ್ಟು 298 ಕೆ.ಜಿ (135 ಕೆಜಿ+163 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಈವರೆಗೆ 3 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದಂತಾಗಿದೆ.

ಹಿಂದಿನ ಲೇಖನದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ವಿವರ
ಮುಂದಿನ ಲೇಖನವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ದರ ರೂ.36 ಇಳಿಕೆ