ಮನೆ ಕ್ರೀಡೆ ಕಾಮನ್‌ ವೆಲ್ತ್‌ ಗೇಮ್ಸ್:‌ ಸೆಮಿಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ, ವೇಟ್‌ ಲಿಫ್ಟಿಂಗ್‌ ನಲ್ಲಿ...

ಕಾಮನ್‌ ವೆಲ್ತ್‌ ಗೇಮ್ಸ್:‌ ಸೆಮಿಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ, ವೇಟ್‌ ಲಿಫ್ಟಿಂಗ್‌ ನಲ್ಲಿ ಕಂಚು ಗೆದ್ದ ಗುರ್ದೀಪ ಸಿಂಗ್‌

0

ಬರ್ಮಿಂಗ್‌ ಹ್ಯಾಮ್‌ (Birmingham): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ಕ್ರಿಕೆಟ್‌ನಲ್ಲಿ ಬಾರ್ಬಡೋಸ್ ತಂಡವನ್ನು 100 ರನ್‌ಗಳಿಂದ ಮಣಿಸಿದ ಭಾರತ ತಂಡ, ಸೆಮಿಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಜೆಮ್ಮಿ ರೊಡ್ರಿಗಸ್ ಅವರ 56 ರನ್‌ಗಳ ನೆರವಿನಿಂದ ಒಟ್ಟು 162 ರನ್ ಗಳಿಸಿತ್ತು.20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡ ಬಾರ್ಬಡೋಸ್ ತಂಡ, 62 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ರೇಣುಕಾ ಸಿಂಗ್ ನಾಲ್ಕು ವಿಕೆಟ್ ಗಳಿಸಿ ಮಿಂಚಿದರು. ಹರ್ಮನ್‌ಪ್ರೀತ್ ಕೌರ್, ರಾಧಾ ಯಾದವ್ ಮತ್ತು ಸ್ನೇಹ ರಾಣಾ ತಲಾ ಒಂದು ವಿಕೆಟ್ ಪಡೆಯುವ ಮೂಲಕ ತಂಡ ಸುಲಭ ಜಯಗಳಿಸಲು ನೆರವಾದರು.

ಈ ಗೆಲುವಿನೊಂದಿಗೆ ಭಾರತ, ‘ಗ್ರೂಪ್ ಎ‘ಯಲ್ಲಿ ನಾಲ್ಕು ಅಂಕ ಮತ್ತು ಎರಡು ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. 6 ಅಂಕ ಗಳಿಸಿರುವ ಆಸ್ಟ್ರೇಲಿಯಾ, ಮೊದಲ ಸ್ಥಾನದಲ್ಲಿದೆ. ಆಗಸ್ಟ್‌ 6 ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ.

ವೇಟ್‌ ಲಿಫ್ಟಿಂಗ್‌ ನಲ್ಲಿ ಕಂಚು ಗೆದ್ದ ಗುರ್ದೀಪ ಸಿಂಗ್‌:

ಕಾಮನ್‌ವೆಲ್ತ್ ಗೇಮ್ಸ್‌ (ಸಿಡಬ್ಲ್ಯುಜಿ)ನಲ್ಲಿ ವೇಟ್‌ಲಿಫ್ಟರ್‌ ಗುರ್ದೀಪ್ ಸಿಂಗ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. 26 ವರ್ಷದ ಗುರ್ದೀಪ್‌ ಸಿಂಗ್‌ ಅವರು, ತಮ್ಮ ಚೊಚ್ಚಲ ಸಿಡಬ್ಲ್ಯುಜಿ ಅಭಿಯಾನದಲ್ಲಿ ಒಟ್ಟಾರೆ 390 ಕೆಜಿ (167 ಕೆಜಿ + 223 ಕೆಜಿ) ಎತ್ತುವ ಮೂಲಕ ಸಾಧನೆ ಮಾಡಿದರು. ಸಿಂಗ್ ಅವರ ಕಂಚಿನೊಂದಿಗೆ, ಭಾರತ ಸಿಡಬ್ಲ್ಯುಜಿಯಲ್ಲಿ 10 (3 ಚಿನ್ನ, 3 ಬೆಳ್ಳಿ ಮತ್ತು 4 ಕಂಚು) ಪದಕ ಗೆದ್ದು ತನ್ನ ವೇಟ್‌ಲಿಫ್ಟಿಂಗ್ ಅಭಿಯಾನವನ್ನು ಪೂರ್ಣಗೊಳಿಸಿತು.

405 ಕೆಜಿ (173 ಕೆಜಿ + 232 ಕೆಜಿ) ಎತ್ತುವ ಮೂಲಕ ಪಾಕಿಸ್ತಾನದ ಮುಹಮ್ಮದ್ ನೂಹ್ ಬಟ್ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ನ್ಯೂಜಿಲೆಂಡ್‌ನ ಡೇವಿಡ್ ಆಂಡ್ರ್ಯೂ ಲಿಟಿ 394 ಕೆಜಿ (170 ಕೆಜಿ + 224 ಕೆಜಿ) ಎತ್ತಿ ಬೆಳ್ಳಿ ಗೆದ್ದರು.

ಕಾಮನ್‌ವೆಲ್ತ್ ಗೇಮ್ಸ್‌ ಕೂಟದಲ್ಲಿ ಭಾರತ ಈವರೆಗೆ 18 (5 ಚಿನ್ನ, 6 ಬೆಳ್ಳಿ, 7 ಕಂಚು) ಪದಕಗಳನ್ನು ಗೆದ್ದಿದೆ.

ಹಿಂದಿನ ಲೇಖನಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸುವ ವಿಚಾರ: ಕೆಳಹಂತದ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆ
ಮುಂದಿನ ಲೇಖನಇನ್ಫೋಸಿಸ್: ಅಭ್ಯರ್ಥಿಗಳ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನ