ಮನೆ ಅಪರಾಧ ಹೈದರಾಬಾದ್: ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

ಹೈದರಾಬಾದ್: ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

0

ಹೈದರಾಬಾದ್(Hydarabad): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್‌ನ ಹಳೆ ನಗರದಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

13 ವರ್ಷದ ಬಾಲಕಿಯನ್ನು ಅಪಹರಿಸಿ ಹೋಟೆಲ್‌ವೊಂದರಲ್ಲಿ ಎರಡು ದಿನಗಳ ಕಾಲ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದಾರೆ. ‌‌

ಮಂಗಳವಾರ ಚಂಚಲಗುಡದಲ್ಲಿ ಔಷಧಿ ಖರೀದಿಸಲು ಹೊರಗೆ ಹೋಗಿದ್ದ ಬಾಲಕಿಯನ್ನು ಯುವಕರು ಅಪಹರಿಸಿದ್ದರು. ಆಕೆ ಮನೆಗೆ ಹಿಂತಿರುಗದ ಕಾರಣ ಆಕೆಯ ತಾಯಿ ದಬೀರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಅಪರಿಚಿತ ಯುವಕರು ಬಾಲಕಿಯನ್ನು ಅಪಹರಿಸಿ, ಕಾರಿನಲ್ಲಿ ಕರೆದುಕೊಂಡು ಹೋಟೆಲ್‌ಗೆ ತೆರಳಿದ್ದರು. ನಂತರ ಆಕೆಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆಯ ನಂತರ ಆರೋಪಿಗಳು ಸಂತ್ರಸ್ತೆಯ ತಾಯಿಗೆ ಬುಧವಾರ ಕರೆ ಮಾಡಿ ಆಕೆ ತಮ್ಮೊಂದಿಗಿದ್ದಾಳೆ ಎಂದು ತಿಳಿಸಿ, ಆಕೆಯನ್ನು ಚಾದರ್‌ಘಾಟ್ ಬಳಿ ಡ್ರಾಪ್ ಮಾಡಿದ್ದರು.

ಸಂತ್ರಸ್ತೆಯ ತಾಯಿ ಪೊಲೀಸರೊಂದಿಗೆ ಆರೋಪಿಗಳ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದರು. ನಂತರ ಪೊಲೀಸರು ಆರೋಪಿಗಳನ್ನು ರೈನ್ ಬಜಾರ್ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ದಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನದಸರಾ ದೀಪಾಲಂಕಾರ: ಆಕರ್ಷಿಸಲಿರುವ ನಟ ಪುನೀತ್ ರಾಜ್ ಕುಮಾರ್ ಪ್ರತಿಕೃತಿ
ಮುಂದಿನ ಲೇಖನಕಪ್ಪು ಎಳ್ಳು ಸೇವನೆ ಆರೋಗ್ಯಕ್ಕೆ ಒಳ್ಳೆಯದು