ಮನೆ ಕ್ರೀಡೆ ಕಾಮನ್‌ ವೆಲ್ತ್‌ ಗೇಮ್ಸ್:‌ ಬಾಕ್ಸಿಂಗ್‌ ನಲ್ಲಿ ಚಿನ್ನ ಗೆದ್ದ ನಿಕಾತ್‌ ಜರೀನ್‌

ಕಾಮನ್‌ ವೆಲ್ತ್‌ ಗೇಮ್ಸ್:‌ ಬಾಕ್ಸಿಂಗ್‌ ನಲ್ಲಿ ಚಿನ್ನ ಗೆದ್ದ ನಿಕಾತ್‌ ಜರೀನ್‌

0

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಬಾಕ್ಸಿಂಗ್ ನಲ್ಲಿ ನಿಕಾತ್ ಜರೀನ್ ಚಿನ್ನ ಗೆದಿದ್ದಾರೆ.

ಮಹಿಳೆಯರ 48-50 ಕೆಜಿ ತೂಕದ ವಿಭಾಗದಲ್ಲಿ  ಉತ್ತರ ಐರ್ಲೆಂಡ್ ನ ಕಾರ್ಲಿ ಮ್ಯಾಕ್ ನೌಲ್ ಅವರನ್ನು ಸೋಲಿಸುವ ಮೂಲಕ ಬಂಗಾರದ ಪದಕ ಗೆದ್ದು ಸಂಭ್ರಮಿಸಿದರು. ಫೈನಲ್ ಪಂದ್ಯದಲ್ಲಿ ನಿಕಾತ್ ಜರೀನ್ 5-0 ಅಂತರದಿಂದ ಗೆದ್ದು ಚಾಂಪಿಯನ್ ಹಾಗಿ ಹೊರಹೊಮ್ಮಿದರು.

ಟ್ರಿಪಲ್‌ ಜಂಪ್‌ನಲ್ಲಿ ಎಲ್ದೊಸಾ ಪಾಲ್ ಬಂಗಾರದ ಕಿರೀಟ ಧರಿಸಿದರು. ಪ್ಯಾರಾ ವಿಭಾಗದ ಮಹಿಳೆಯ ಟೇಬಲ್‌ ಟೆನಿಸ್‌ನಲ್ಲಿ ಭಾವಿನಾ ಪಟೇಲ್ ಕೂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಆಥ್ಲೀಟ್ ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು,

ಭಾರತದ ಎಲ್ಕೊಸಾ ಪಾಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್ ಪುರುಷರ ಟ್ರಿಪಲ್‌ ಜಂಪ್‌ ವಿಭಾಗದಲ್ಲಿ ಕ್ರಮವಾಗಿ ಚಿನ್ನ (17.03 ಮೀ) ಮತ್ತು ಬೆಳ್ಳಿ (17.02 ಮೀ) ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕಾಮನ್‌ವೆಲ್ತ್ ಕೂಟದ ಇತಿಹಾಸದಲ್ಲಿ ಒಂದೇ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಜೋಡಿ ಇದು.

ಈವರೆಗೂ 17 ಚಿನ್ನ, 12 ಬೆಳ್ಳಿ ಮತ್ತು 19 ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 

2002ರಿಂದ ಇಲ್ಲಿಯವರೆಗೆ ನಡೆದ ಪ್ರತಿ ಕಾಮನ್‌ವೆಲ್ತ್ ಕೂಟದಲ್ಲಿ ಭಾರತವು 50 ಪದಕಗಳ ಗಡಿ ದಾಟಿದೆ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ 101 ಪದಕಗಳನ್ನು ಗಳಿಸಿದ್ದು ಇದುವರೆಗಿನ ಗರಿಷ್ಠ ದಾಖಲೆ. ಹೋದ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ 66 ಪದಕಗಳನ್ನು ತಂಡವು ಜಯಿಸಿತ್ತು.

ಕೂಟದ ಅಂತಿಮ ದಿನವಾದ ಸೋಮವಾರವೂ ಭಾರತಕ್ಕೆ ಮತ್ತಷ್ಟು ಪದಕಗಳು ಒಲಿಯುವುದು ಖಚಿತವಾಗಿದೆ. ಬ್ಯಾಡ್ಮಿಂಟನ್ ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಪುರುಷರಲ್ಲಿ ಕೆ.ಶ್ರೀಕಾಂತ್, ಡಬಲ್ಸ್‌ ವಿಭಾಗಗಳಲ್ಲಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಆಟಗಾರರು ಫೈನಲ್‌ನಲ್ಲಿ ಸೆಣಸುವರು. ಪುರುಷರ ಹಾಕಿ ಫೈನಲ್‌ ಮತ್ತು ಪುರುಷರ ಟೇಬಲ್‌ ಟೆನಿಸ್‌ನಲ್ಲಿಯೂ ಭಾರತದ ಸ್ಪರ್ಧಿಗಳಿದ್ದಾರೆ.